ADVERTISEMENT

ಇಬ್ರಾಹಿಂಪುರದಲ್ಲಿ ಮನೆ ಚಾವಣಿ ಕುಸಿತ

ಬಸವನ ಬಾಗೇವಾಡಿಯಲ್ಲಿ 4.8 ಸೆಂ.ಮೀ.ಮಳೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 12:48 IST
Last Updated 11 ಅಕ್ಟೋಬರ್ 2022, 12:48 IST
ವಿಜಯಪುರ ನಗರದಲ್ಲಿ ಸುರಿಯುವ ಮಳೆಯಲ್ಲೇ ಟಾಂಗಾ ಸವಾರಿ ಕಂಡುಬಂದಿತು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಸುರಿಯುವ ಮಳೆಯಲ್ಲೇ ಟಾಂಗಾ ಸವಾರಿ ಕಂಡುಬಂದಿತು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆಯಲ್ಲಿ ಮನೆಯೊಂದರ ಚಾವಣಿ ಕುಸಿತವಾಗಿದೆ. ಮನೆಯಲ್ಲಿದ್ದ ವೃದ್ಧೆ ಇಂದಿರಾಬಾಯಿ ಈ ಸಂದರ್ಭದಲ್ಲಿ ಮುಂಭಾಗದ ಕೋಣೆಯಲ್ಲಿ ಮಲಗಿದ್ದ ಕಾರಣ ಯಾವುದೇ ಅಪಾಯವಾಗಿಲ್ಲ.

ಹಿಂಗಾರಿ ಬಿತ್ತನೆಗೆ ಮಳೆಯಿಂದ ಅನುಕೂಲವಾಗಿದೆ. ಆದರೆ, ಕೊಯ್ಲಿಗೆ ಬಂದಿರುವ ಸೂರ್ಯಕಾಂತಿ, ಗೋವಿನ ಜೋಳ, ಈರುಳ್ಳಿ, ಶೇಂಗಾ ಬೆಳೆಗೆ ಸಮಸ್ಯೆಯಾಗಿದೆ. ಅಲ್ಲದೇ, ದ್ರಾಕ್ಷಿ ಚಾಟ್ನಿಗೂ ಅನಾನುಕೂಲವಾಗಿದೆ.

ADVERTISEMENT

ಬಸವನ ಬಾಗೇವಾಡಿ ಪಟ್ಟಣದಲ್ಲಿ ಅತ್ಯಧಿಕ ಅಂದರೆ, 48.9 ಮಿ.ಮೀ. ಮಳೆಯಾಗಿದೆ. ಉಳಿದಂತೆವಿಜಯಪುರ 33.2, ನಾಗಠಾಣ 10.6, ಭೂತನಾಳ 17.6, ಹಿಟ್ನಳ್ಳಿ 15.6, ತಿಕೋಟಾ 9.2, ಕುಮಟಗಿ 2.2, ನಾದ ಬಿ ಕೆ 22, ಕಡ್ಲೆವಾಡ 21, ದೇವರಹಿಪ್ಪರಗಿ 17.4,ಮನಗೂಳಿ 1.1, ಹೂವಿನ ಹಿಪ್ಪರಗಿ 6.6, ಮಟ್ಟಿಹಾಳ 12.6, ಹೊರ್ತಿ 4, ಚಡಚಣ 4, ಢವಳಗಿ 1.8, ಸಿಂದಗಿ 2.5, ಆಲಮೇಲ 5.5, ರಾಮನಹಳ್ಳಿ 4.2 ಮಿ.ಮೀ.ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.