ADVERTISEMENT

23ರಂದು ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 13:21 IST
Last Updated 16 ನವೆಂಬರ್ 2023, 13:21 IST
ಮುದ್ದೇಬಿಹಾಳ ತಾಲೂಕಿನ ಇಣಚಗಲ್‌ನಲ್ಲಿ ಭೋವಿ ವಡ್ಡರ ಸಮಾಜದ ಜನಜಾಗೃತಿ ರಥಯಾತ್ರೆಗೆ ಭೋವಿ ಸಮಾಜದ ಮುಖಂಡ ಹಣಮಂತ ಭೈರವಾಡಗಿ ಚಾಲನೆ ನೀಡಿದರು
ಮುದ್ದೇಬಿಹಾಳ ತಾಲೂಕಿನ ಇಣಚಗಲ್‌ನಲ್ಲಿ ಭೋವಿ ವಡ್ಡರ ಸಮಾಜದ ಜನಜಾಗೃತಿ ರಥಯಾತ್ರೆಗೆ ಭೋವಿ ಸಮಾಜದ ಮುಖಂಡ ಹಣಮಂತ ಭೈರವಾಡಗಿ ಚಾಲನೆ ನೀಡಿದರು   

ಮುದ್ದೇಬಿಹಾಳ: ಬಾಗಲಕೋಟೆಯಲ್ಲಿ ನ. 23ರಂದು ಉದ್ಘಾಟನೆಗೊಳ್ಳಲಿರುವ ಭೋವಿ ಗುರುಪೀಠದ ಗುರುಕುಟೀರ ಉದ್ಘಾಟನೆ ನಿಮಿತ್ತ ಜನಜಾಗೃತಿ ರಥಯಾತ್ರೆಗೆ ತಾಲ್ಲೂಕಿನ ಇಣಚಗಲ್ ಗ್ರಾಮದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ರಥಯಾತ್ರೆಗೆ ಚಾಲನೆ ನೀಡಿದ ಭೋವಿ ಸಮಾಜದ ಮುಖಂಡ ಹಣಮಂತ ಭೈರವಾಡಗಿ, ‘ನ. 23 ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಭೋವಿ ವಡ್ಡರ ಸಮಾಜದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಆಗಮಿಸುವರು. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಜೊತೆಗೆ ಲಿಂ.ಶರಣಬಸವ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೋವಿ ಸಮಾಜದಿಂದ ಜನಜಾಗೃತಿ ರಥ ಸಂಚರಿಸಿ ಸಮಾಜದವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಭೋವಿ ವಡ್ಡರ ಸಮಾಜದ ಅಧ್ಯಕ್ಷ ಸಿದ್ದಣ್ಣ ಆಲಕೊಪ್ಪರ, ಪ್ರಮುಖರಾದ ಹೊನ್ನಪ್ಪ ದೊಡ್ಡಮನಿ, ಕಾಶಪ್ಪ ಭೈರವಾಡಗಿ, ನಾಗಪ್ಪ ಕವಡಿಮಟ್ಟಿ, ದುರ್ಗಪ್ಪ ದೊಡ್ಡಮನಿ, ರಾಜು ಭೈರವಾಡಗಿ, ಭೀಮಣ್ಣ ಗುಜ್ಜಲ್, ದ್ಯಾಮಣ್ಣ ಢವಳಗಿ, ಉದಯಕುಮಾರ್ ಭೈರವಾಡಗಿ, ಮುತ್ತು ಕವಡಿಮಟ್ಟಿ, ಕೃಷ್ಣ ಸೋಮನಾಳ, ಮರಗಪ್ಪ ಟಕ್ಕಳಕಿ, ಆನಂದ ದೊಡ್ಡಮನಿ, ಪ್ರಶಾಂತ ಭೈರವಾಡಗಿ, ಕೃಷ್ಣ ಭೈರವಾಡಗಿ, ನಾಗರಾಜ್ ಬಂಡಿವಡ್ಡರ್, ಯಲ್ಲಪ್ಪ ಕವಡಿಮಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.