ADVERTISEMENT

ಇಂಚಗೇರಿ ರೇವಣಸಿದ್ಧೇಶ್ವರ ಶ್ರೀಗಳ ಶುಭ ಹಾರೈಕೆ 

ಶ್ರೀ ಸಂಗಮೇಶ್ವರ ಮಹಾರಾಜರ ಚಿತ್ರತಂಡಕ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:59 IST
Last Updated 15 ನವೆಂಬರ್ 2024, 14:59 IST
ಹೊರ್ತಿ ಸಮೀಪದ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಇಂಚಗೇರೀಮಠದ ರೇವಣಸಿದ್ಧ ಮಹಾರಾಜರು ಹೊಳೆ ಹಿಪ್ಪರಗಿಯ ಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್‌ ವಿಡಿಯೋ ಹಾಡು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಧವಾನಂದ.ವೈ, ಶ್ರೀಶೈಲ ಗಾಣಿಗೇರ, ವಿಶ್ವಪ್ರಕಾಶ ಮಲಗೊಂಡ ಇದ್ದರು
ಹೊರ್ತಿ ಸಮೀಪದ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಇಂಚಗೇರೀಮಠದ ರೇವಣಸಿದ್ಧ ಮಹಾರಾಜರು ಹೊಳೆ ಹಿಪ್ಪರಗಿಯ ಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್‌ ವಿಡಿಯೋ ಹಾಡು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಧವಾನಂದ.ವೈ, ಶ್ರೀಶೈಲ ಗಾಣಿಗೇರ, ವಿಶ್ವಪ್ರಕಾಶ ಮಲಗೊಂಡ ಇದ್ದರು   

ಹೊರ್ತಿ: ‘ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹೊಳೆ ಹಿಪ್ಪರಗಿಯ ಸಂಗಮೇಶ್ವರ ಮಹಾರಾಜರು ಚಿತ್ರದ ಲಿರಿಕಲ್‌ ವಿಡಿಯೋ ಹಾಡು ನ.21ರಂದು ಬಿಡುಗಡೆಯಾಗಲಿರುವ ಆಗಲಿರುವ ಚಿತ್ರತಂಡಕ್ಕೆ ಚಡಚಣ ತಾಲ್ಲೂಕಿನ ಹೊರ್ತಿ ಸಮೀಪದ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀಮಠದ ರೇವಣಸಿದ್ದೇಶ್ವರ ಶ್ರೀಗಳು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನ.21ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸುಕ್ಷೇತ್ರ ಹಿಪ್ಪರಗಿ ಸದ್ಗುರು ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಚಿತ್ರದ ಲಿರಿಕಲ್ ಬಿಡುಗಡೆಯಾಗಲಿದ್ದು, ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಲಿರಿಕಲ್‌ ವಿಡಿಯೋ ಕೂಡ ವೀಕ್ಷಿಸಿದ್ದಾರೆ.
ಈ ವೇಳೆ, ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಹಾಗೂ ಚಲನಚಿತ್ರದ ಕುರಿತು ಅನೇಕ ವಿಷಯಗಳನ್ನು ಇಂಚಗೇರಿ ಮಠದಲ್ಲಿ ಸಿನಿಮಾ ತಂಡದವರ ಜೊತೆ ಮಹಾರಾಜರು ಚರ್ಚಿಸಿದರು.

ಚುಟು, ಚುಟು ಹಾಡಿನ ಮೂಲಕ ಗಮನ ಸೆಳೆದ ಗಾಯಕ ರವೀಂದ್ರ ಸೊರಗಾವಿ ಅವರು, 'ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ' ಭಕ್ತಿ ಪ್ರಧಾನ ಹಾಡಿಗೆ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಪ್ರಶಂಶಿಸಿದರು.

ADVERTISEMENT

ಈ ವೇಳೆ, ಚಿತ್ರ ನಿರ್ಮಾಪಕ ಮಾಧವಾನಂದ ವೈ, ಚಿತ್ರ ನಿರ್ಮಾಪಕ ಶ್ರೀಶೈಲ ಗಾಣಿಗೇರ, ನಟ ವಿಶ್ವಪ್ರಕಾಶ ಮಲಗೊಂಡ, ಪ್ರಕಾಶ ಕಾಲತಿಪ್ಪಿ, ಮಲ್ಲಿಕಾರ್ಜುನ ಕಾಲತಿಪ್ಪಿ ಇದ್ದರು.
ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ 'ಮಾಧವಾನಂದ ವೈ' ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಹಿಪ್ಪರಗಿಯ ಶ್ರೀ ಪ್ರಭೂಜೀ ಮಹಾರಾಜರ ಮಾರ್ಗದರ್ಶನದಲ್ಲಿ 'ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು' ಚಿತ್ರದ ಹಾಡುಗಳು ತಯಾರಾಗಿವೆ.

ಹೊಸ ಪ್ರತಿಭೆ ರವಿ ನಾರಾಯಣ್ ಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ ಟಿ. ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ ನಿರ್ದೇಶನ, ಸಿ.ನಾರಾಯಣ್ ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ, ಡಿ.ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.