ADVERTISEMENT

ಜುಡೋ: ವಿಜಯಪುರಕ್ಕೆ ಮೂರು ಪದಕ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:40 IST
Last Updated 30 ಮೇ 2022, 15:40 IST
ಬೆಂಗಳೂರಲ್ಲಿ ನಡೆದ ಮಿನಿ ಓಲಂಪಿಕ್‌ ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ 
ಬೆಂಗಳೂರಲ್ಲಿ ನಡೆದ ಮಿನಿ ಓಲಂಪಿಕ್‌ ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ    

ವಿಜಯಪುರ: ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಮಿನಿ ಓಲಂಪಿಕ್‌ಜುಡೋ ಕ್ರೀಡೆಯಲ್ಲಿ ವಿಜಯಪುರದ ಹರಣಶಿಕಾರಿ ಸಮುದಾಯದ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ಕ್ರೀಡಾಪಟುಗಳು ಭಾಗವಹಿಸಿ ಮೂರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಶ್ರಾವಂತಿ ಶಿಂಗೆ ಚಿನ್ನದ ಪದಕ ಪಡೆದರು. ವಿಶೇಷವಾಗಿ ಆದಿವಾಸಿ ಅಲೆಮಾರಿ ಬುಡಕಟ್ಟು ಹರಣಶಿಕಾರಿ ಸಮುದಾಯದ ತನುಶ್ರೀ ಕಾಳೆ ಕಂಚಿನ ಪದಕ, ಸುಭಾಶ್‌ ದೊಡಮನಿ ಕಂಚಿನ ಪದಕ, ಅರ್ಚನಾ ಕಾಳೆ ನಾಲ್ಕನೇ ಸ್ಥಾನ ಪಡೆದರು.

ವಿದ್ಯಾರ್ಥಿಗಳಿಗೆ ಶಂಕರ ಎಸ್.ಎಸ್. ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ರಾಜ್ಯ ಸ್ವೇರೋಸ್ ಕರ್ನಾಟಕ ಕಲಿಕಾ ಕೇಂದ್ರದ ವಾಸುದೇವ ಕಾಳೆ ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.