ADVERTISEMENT

ವಿಜಯಪುರ | ಮಹಿಳಾ ಪರ ಗಟ್ಟಿಧ್ವನಿ ಕಮಲಾ ಹಂಪನಾ: ಸಾಹಿತಿ ವಿಜಯಲಕ್ಷ್ಮಿ ಹಳಕಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:24 IST
Last Updated 23 ಜೂನ್ 2024, 15:24 IST
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಾಹಿತಿ ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮೆಹತಾಬ ಕಾಗವಾಡ ಮಾತನಾಡಿದರು.
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಾಹಿತಿ ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮೆಹತಾಬ ಕಾಗವಾಡ ಮಾತನಾಡಿದರು.   

ವಿಜಯಪುರ: ಸಾಹಿತಿ ಕಮಲಾ ಹಂಪನಾ ಅವರು ಮಹಿಳಾ ಪರ ಗಟ್ಟಿ ಧ್ವನಿಯಾಗಿದ್ದರು. ಅವರಿಗೆ ಸಾಹಿತ್ಯ ರಚನೆ ಮತ್ತು ಕನ್ನಡದ ಪ್ರೇಮ ರಕ್ತಗತವಾಗಿ ಬಂದಿತ್ತು ಎಂದು ಸಾಹಿತಿ ವಿಜಯಲಕ್ಷ್ಮಿ ಹಳಕಟ್ಟಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಾಹಿತಿ ಕಮಲಾ ಹಂಪನಾ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಮಲಾ ಹಂಪನಾ ಅವರು ಅನೇಕ ಕೃತಿಗಳನ್ನು ಸಾರತ್ವತ ಲೋಕಕ್ಕೆ ಸಮರ್ಪಿಸಿದ್ದಾರೆ ಎಂದರು.

ಮಹಿಳಾ ಸಬಲೀಕರಣ ಮತ್ತು ಸೃಜನಶೀಲತೆ ಪ್ರತೀಕವಾಗಿದ್ದ ಅವರು ಮೂಡಬಿದರೆಯಲ್ಲಿ ಜರುಗಿದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡದ ಕಂಪನ್ನು ಹರಡಿದ ಶ್ರೇಷ್ಠ ಮಹಿಳಾ ಸಾಹಿತಿ ಎಂದರು.  

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ವಿರಳವಾಗಿರುವ ಕಾಲದಲ್ಲಿ ಜೈನ್ ಸಾಹಿತ್ಯ ಸಂಶೋಧನೆ ಮಾಡಿ ನಾಡಿನ ಕೀರ್ತಿ ಹೆಚ್ಚಿಸಿದವರು, ಇಂದಿನ ಯುವ ಜನಾಂಗಕ್ಕೆ ಸುಂದರ ಬದುಕಿನ ಗುಟ್ಟು ಸಾರಿದವರು ಮತ್ತು ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದ ಕಮಲಾ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರು.

ಅಭಿಷೇಕ ಚಕ್ರವರ್ತಿ, ಮೆಹತಾಬ ಕಾಗವಾಡ ಮಾತನಾಡಿದರು. ಸಂಗಮೇಶ ಮೇತ್ರಿ, ಶರಣಗೌಡ ಪಾಟೀಲ, ರವಿ ಕಿತ್ತೂರ, ಸುಭಾಸ ಕನ್ನೂರ, ಗಂಗಮ್ಮ ರಡ್ಡಿ, ಅನ್ನಪೂರ್ಣ ಬೆಳ್ಳಣೆವರ, ಶೋಭಾ ಮೆಡಾಗಾರ, ಸಂಗಮೇಶ ಚೂರಿ, ಲತಾ ಗುಂಡಿ ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ, ಡಿ.ಎಸ್ ಬಿರಾದಾರ, ವಿದ್ಯಾವತಿ ಅಂಕಲಗಿ, ಜಿ.ಎಸ್ ಬಳ್ಳೂರ, ಆನಂದ ಕುಲಕರ್ಣಿ, ಶಿವಾಜಿ ಮೋರೆ, ಸಿದ್ದಾರಾಮ ಬಿರಾದಾರ, ಅಮೋಘಸಿದ್ಧ ಪೂಜಾರಿ, ಪ್ರಶಾಂತ ಕಾಳೆ, ಟಿ.ಆರ್ ಹಾವಿನಾಳ, ಎ.ಎಸ್ ಕರಜಗಿ, ಗಂಗಮ್ಮ ರೆಡ್ಡಿ, ಭಾಗೀರಥಿ ಶಿಂಧೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.