ದೇವರಹಿಪ್ಪರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ ವಾಲೀಕಾರ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಕನ್ನಡ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಸಮ್ಮೇಳನದಲ್ಲಿ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಾಡು ನುಡಿ. ನೆಲ ಜಲ. ಸಂಸ್ಕೃತಿ ಪರಂಪರೆ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸ್ಥಳೀಯರಿಗೆ ಪ್ರಾಧ್ಯಾನ್ಯ. ತಾಲ್ಲೂಕಿನ ಎಲ್ಲ ಸ್ವಾಮೀಜಿಗಳು ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸುತ್ತಾರೆ. ಎಲ್ಲರ ಸಹಕಾರ, ಸಲಹೆ ಅತ್ಯಗತ್ಯ’ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ನ.29 ರಂದು ದೇವರಹಿಪ್ಪರಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಶಾಸಕ ರಾಜುಗೌಡ ಪಾಟೀಲ ಹಾಗೂ ಗೌರವಾನ್ವಿತ ಮುಖಂಡರಿಗೆ ಹಾಗೂ ಹಿರಿಯರಿಗೆ ಸಮ್ಮೇಳನ ಯಶಸ್ವಿಗೊಳಿಸಲು ವಿನಂತಿಸಲಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನವೀರ ಕುದರಿ ಮಾತನಾಡಿ, ಎಲ್ಲರೂ ತನು ಮನ ಧನದಿಂದ ಸಹಕರಿಸಿ ಮಾದರಿಯ ಸಮ್ಮೇಳನ ಮಾಡುವುದರ ಮೂಲಕ ದೇವರಹಿಪ್ಪರಗಿ ತಾಲ್ಲೂಕಿನ ಘನತೆಯನ್ನು ಹೆಚ್ಚಿಸೋಣ ಎಂದರು.
ಹಿರಿಯ ವೈದ್ಯ ಆರ್.ಆರ್.ನಾಯಿಕ ಮಾತನಾಡಿ, ಅಕ್ಷರ ಜಾತ್ರೆಯನ್ನು ತಾಲ್ಲೂಕಿನ ಎಲ್ಲ ಗ್ರಾಮೀಣ ಜನರೊಂದಿಗೆ ಬೆರೆತು ಆಚರಿಸೋಣ ಎಂದು ಸಲಹೆ ನೀಡಿದರು.
ಕಸಾಪ ತಾಲ್ಲೂಕು ಮಾಜಿಅಧ್ಯಕ್ಷ ಸಿದ್ದು ಮೇಲಿನಮನಿ, ಕಾಶಿನಾಥ ತಳಕೇರಿ, ಮುತ್ತು ಅಗ್ನಿ ಮಾತನಾಡಿದರು.
ಕಸಾಪ ಸಿಂದಗಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಎಸ್.ಜಿ.ತಾವರಖೇಡ, ಸೋಮಶೇಖರ ಹಿರೇಮಠ, ಮಡುಗೌಡ ಬಿರಾದಾರ, ಗುರುರಾಜ ಆಕಳವಾಡಿ, ಪುಟ್ಟು ಕೋರಿ, ಅಣ್ಣು ಭಜಂತ್ರಿ, ರವೀಂದ್ರ ಕೊಟೀನ, ಸಂತೋಷ ಈಳಗೇರ, ಶಿವರಾಜ ತಳವಾರ, ಸದಾಶಿವ ಗುಡಿಮನಿ, ಸೋಮು ದೇವೂರ, ನಾಗಯ್ಯ ಹಿರೇಮಠ, ಮಲಕು ಸುರಗಿಹಳ್ಳಿ, ಬಸವರಾಜ ಬಡಿಗೇರ, ಶಿವಶರಣ ಪೂಜಾರಿ, ಸಂಗನಬಸು ನಂದ್ಯಾಳ, ಅಶೋಕ ಪತ್ತಾರ, ರಾಘವೇಂದ್ರ ಕುಲಕರ್ಣಿ, ರಾಜು ಲಮಾಣಿ, ರಾಘವೇಂದ್ರ ಎಮ್ ಎಸ್, ಪ್ರಕಾಶ ಪೂಜಾರಿ, ಆನಂದ ಶಿಕ್ಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.