ADVERTISEMENT

ವಿಜಯಪುರ: ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:12 IST
Last Updated 3 ಮಾರ್ಚ್ 2024, 14:12 IST
ಎಂ.ಸಿ ಮುಲ್ಲಾ
ಎಂ.ಸಿ ಮುಲ್ಲಾ   

ವಿಜಯಪುರ: ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ರಾಜ್ಯದ ಅಂಗಡಿಗಳ ಮೇಲೆ ಕನ್ನಡದ ನಾಮಲಕಗಳನ್ನು ಶೇ 60ರಷ್ಟು ಅಳವಡಿಸಬೇಕು. ಜಾಹೀರಾತು ಫಲಕಗಳು ಕೂಡಾ ಕನ್ನಡದಲ್ಲಿರಬೇಕು. ಈ ನಿಟ್ಟಿನಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಕನ್ನಡ ನಾಮಲಕಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೇ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ರೂಪಿಸಲಿದೆ’ ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾರ್ಚ್‌ 5ರಂದು ಮನವಿ ಸಲ್ಲಿಸಲಿದ್ದು, ಮನವಿ ಬಳಿಕ ಅಂಗಡಿಗಳ ಮೇಲೆ ಕನ್ನಡ ನಾಮಫಲಕಗಳು ರಾರಾಜಿಸದಿದ್ದಲ್ಲಿ, ಬೆಂಗಳೂರು ಮಾದರಿಯಲ್ಲಿ ಕರವೇ ಜಿಲ್ಲಾ ಘಟಕ ಹೋರಾಟಕ್ಕಿಳಿಯಲಿದೆ’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಮಹಾದೇವ ರಾವಜಿ, ಸುರೇಶ ಬಿಜಾಪುರ, ಎಸ್.ಎಂ. ಮಡಿವಾಳರ, ದಸ್ತಗೀರ ಸಾಲೋಟಗಿ, ಫಯಾಜ್ ಕಲಾದಗಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.