ADVERTISEMENT

ಆಲಮೇಲ: ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
<div class="paragraphs"><p>ಗೃಹಲಕ್ಷ್ಮಿ ಯೋಜನೆ</p></div>

ಗೃಹಲಕ್ಷ್ಮಿ ಯೋಜನೆ

   

ಆಲಮೇಲ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿ ತಮಗೆ ಬಂದ 12 ತಿಂಗಳ ಗೃಹಲಕ್ಷ್ಮಿ ಹಣದಿಂದ ನವರಾತ್ರಿ ನಿಮಿತ್ತ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ದೇವಿ ಮೂರ್ತಿಗೆ 250 ಗ್ರಾಂ ತೂಕದ  ಬೆಳ್ಳಿ ಕಿರೀಟ ಮಾಡಿಸಿದ್ದಾರೆ. ಅವರನ್ನು ಶಾಸಕ ಅಶೋಕ ಮನಗೂಳಿ ಸನ್ಮಾನಿಸಿದರು.

ಅಶೋಕ ಮನಗೂಳಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಪಾಲಿಸಿದೆ. ಪಂಚ ಗ್ಯಾರಂಟಿ ಯೋಜನೆಯ ಲಾಭವನ್ನು ರಾಜ್ಯದ 1.60 ಕೋಟಿ ಫಲಾನುಭವಿಗಳು ಪಡೆದಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.