ADVERTISEMENT

ಸಿಂದಗಿ: ಆಲಿಕಲ್ಲು ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 12:50 IST
Last Updated 18 ಮಾರ್ಚ್ 2023, 12:50 IST
ಸಿಂದಗಿ ಪಟ್ಟಣದ ಹೊರ ವಲಯದಲ್ಲಿ ಶನಿವಾರ ಮಧ್ಯಾಹ್ನ ಮಳೆಯೊಂದಿಗೆ ಸುರಿದ ಭಾರೀ ಪ್ರಮಾಣದ ಆಲಿಕಲ್ಲುಗಳನ್ನು ಸಂಗ್ರಹಿಸಿದ  ರೈತ ಸೋಮು ಬಸಪ್ಪ ಹೂಗಾರ  
ಸಿಂದಗಿ ಪಟ್ಟಣದ ಹೊರ ವಲಯದಲ್ಲಿ ಶನಿವಾರ ಮಧ್ಯಾಹ್ನ ಮಳೆಯೊಂದಿಗೆ ಸುರಿದ ಭಾರೀ ಪ್ರಮಾಣದ ಆಲಿಕಲ್ಲುಗಳನ್ನು ಸಂಗ್ರಹಿಸಿದ  ರೈತ ಸೋಮು ಬಸಪ್ಪ ಹೂಗಾರ     

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ ಶನಿವಾರ ಮಧ್ಯಾಹ್ನ ಗುಡುಗು, ಸಿಡಿಲು ಮತ್ತು ಗಾಳಿಯ ಆರ್ಭಟದೊಂದಿಗೆ ಆಲಿಕಲ್ಲು ಮಳೆಯಾಗಿದೆ.

ಸುಮಾರು ಒಂದು ತಾಸು ಆಲಿಕಲ್ಲು ಮಳೆ ಸುರಿದಿದೆ. ಚರಂಡಿ ಉಕ್ಕಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತಗ್ಗು ಪ್ರದೇಶದ ಮನೆ, ಅಂಗಡಿ, ಮಳಿಗೆಗಳಿಗೆ ನೀರು ನುಗ್ಗಿ, ತೊಂದರೆಯಾಗಿದೆ.

ತಾಳಿಕೋಟೆ ಮತ್ತು ನಾಲತವಾಡ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗಾಳಿ ಮಳೆಯಾಗಿದೆ. ಆಲಿಕಲ್ಲು ಮಳೆಯಾಗಿರುವುದರಿಂದ ಕೊಯ್ಲಿಗೆ ಬಂದಿರುವ ದ್ರಾಕ್ಷಿ, ಜೋಳ, ಗೋಧಿ ಮತ್ತಿತರರ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.