ADVERTISEMENT

Karnataka Waqf Row | ಕಾಂಗ್ರೆಸ್‌ನಿಂದ ಲ್ಯಾಂಡ್ ಜಿಹಾದ್‌ಗೆ ಕುಮ್ಮಕ್ಕು: ಶೋಭಾ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 15:28 IST
Last Updated 6 ನವೆಂಬರ್ 2024, 15:28 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ವಿಜಯಪುರ: ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದ್ದು, ಇದನ್ನು ಪರಿಶೀಲಿಸಲು ಬರುವಂತೆ ನಾನು ಮಾಡಿಕೊಂಡ ವಿನಂತಿ ಮೇರೆಗೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಿದ್ದಾರೆ. ಇದನ್ನು ಕಾಂಗ್ರೆಸ್‌ ವಿರೋಧಿಸುತ್ತಿರುವುದು ಖಂಡನೀಯ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಜಂಟಿ ಸದನ ಸಮಿತಿಯಲ್ಲಿ ಬಿಜೆಪಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳ ಪ್ರತಿನಿಧಿಗಳು ಇದ್ದಾರೆ. ಅಧ್ಯಕ್ಷರೊಂದಿಗೆ ಬರಬೇಕಾಗಿರುವುದು ಅವರ ಜವಾಬ್ದಾರಿ. ವೋಟ್‌ ಬ್ಯಾಂಕ್‌ ರಾಜಕಾರಣ ಮತ್ತು ತುಷ್ಟೀಕರಣದ ಹಿನ್ನೆಲೆಯಲ್ಲಿ ಸಮಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿರೀಕ್ಷಿತ’ ಎಂದರು.

‘ಸಮಿತಿ ಅಧ್ಯಕ್ಷರು ಕೇವಲ ಧರಣಿ ಕುಳಿತಿರುವ ಬಿಜೆಪಿಗರ ಅಹವಾಲು ಮಾತ್ರವಲ್ಲ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಳಿತು ರೈತರು, ಮಠಾಧೀಶರು, ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಕಾಂಗ್ರೆಸ್‌ ಮುಖಂಡರು ಕೂಡ ತಮ್ಮ ಅಹವಾಲು ಸಲ್ಲಿಸಲು ಅವಕಾಶ ಇದೆ’ ಎಂದು ಹೇಳಿದರು.

ADVERTISEMENT

‘ಪಾಲ್‌ ಅವರು ರಾಜ್ಯದಲ್ಲಿ ಸದ್ಯ ವಕ್ಫ್‌ ಸಂಬಂಧಿಸಿದಂತೆ ನಡೆದಿರುವ ನೈಜ ಸಂಗತಿ  ಅರಿಯಲಿದ್ದಾರೆ. ಮುಂದೆ ಕಾಯ್ದೆ ತಿದ್ದುಪಡಿ ಮಾಡುವಾಗ ಅನುಕೂಲವಾಗಲಿದೆ. ಇದರಿಂದ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.