ADVERTISEMENT

ಕಾರ್ತೀಕ ಏಕಾದಶಿ: ಪಂಢರಪುರಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 15:51 IST
Last Updated 23 ನವೆಂಬರ್ 2023, 15:51 IST
ಮಹಾರಾಷ್ಟ್ರದ ಪಂಢರಪುರದಲ್ಲಿ ಗುರುವಾರ ಲಕ್ಷಾಂತರ ಭಕ್ತರು ಚಂದ್ರಭಾಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು
ಮಹಾರಾಷ್ಟ್ರದ ಪಂಢರಪುರದಲ್ಲಿ ಗುರುವಾರ ಲಕ್ಷಾಂತರ ಭಕ್ತರು ಚಂದ್ರಭಾಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು   

ಪಂಢರಪುರ (ಚಡಚಣ/ವಿಜಯಪುರ): ಕಾರ್ತೀಕ ಏಕಾದಶಿ ಹಿನ್ನೆಲೆಯಲ್ಲಿ ಗುರುವಾರ ಪಂಢರಪುರಕ್ಕೆ ಭಕ್ತ ಸಾಗರವೇ ಹರಿದು ಬಂದಿತು.

ಕಾರ್ತಿಕ ಏಕಾದಶಿ ಮುನ್ನಾ ದಿನವೇ ವಾರಿ (ಪಾದಯಾತ್ರೆ) ಮೂಲಕ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯದ ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತರು ಪಂಢರಪುರಕ್ಕೆ ಆಗಮಿಸಿ, ಇಲ್ಲಿನ ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ವಿಠ್ಠಲನ ದರ್ಶನ ಪಡೆದರು.

ಸಂಪ್ರದಾಯದಂತೆ ಮಹಾರಾಷ್ಟ್ರ ಸರ್ಕಾರದ ಪ್ರಥಮ ಪೂಜೆಯನ್ನು ಈ ಬಾರಿ ಉಪ ಮುಖ್ಯಮಂತ್ರಿ ದೇವೀಂದ್ರ ಫಡ್ನವಿಸ್‌ ದಂಪತಿ ನೆರವೇರಿಸಿದರು.  

ADVERTISEMENT

ನಾಮ ಸಂಕೀರ್ತನೆ: ಏಕಾದಶಿ ದಿನದಂದು ವಾರ್ಕರಿ ಸಪ್ತಾಹ ಜರುಗಿತು. ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ ನಾಮದೇವ, ದಾಮಾಜಿ, ಮೀರಾಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗ ಪಧ್ಯಗಳನ್ನು ವಾರ್ಕರಿ ರಾಗದಿಂದ ಹಾಡುತ್ತಾ ಕುಣಿಯುತ್ತ ಭಜನೆ, ನಾಮ ಸಂಕೀರ್ತನೆಗಳಲ್ಲಿ ಭಕ್ತರು ಮೈಮರೆತರು.

ಮಹಾರಾಷ್ಟ್ರದ ಪಂಢರಪುರದಲ್ಲಿ ಗುರುವಾರ ಲಕ್ಷಾಂತರ ಭಕ್ತರು ವಿಠ್ಠಲ– ರುಕ್ಮಿಣಿ ದರ್ಶನ ಪಡೆದರು

ತುಳಸಿ ಮಾಲೆ ಧರಿಸಿದ ಸಂತರು, ತಲೆಯ ಮೇಲೆ ತುಳಸಿಕಟ್ಟೆ ಹೊತ್ತು, ಹೆಜ್ಜೆ ಹಾಕುತ್ತಾ ಕೈ ಕೈ ಹಿಡಿದುಕೊಂಡು ಕುಣಿದು ಸಂಭ್ರಮಿಸಿ ಗೋಪಾಲನಿಗೆ ಜೈಕಾರ ಹಾಕಿದರು. ಪಂಢರಪುರದ ಪ್ರಮುಖ ಬೀದಿಗಳಲ್ಲಿ ಸಂಜೆ ವಿಠ್ಠಲ ರುಕ್ಮಿಣಿ ಪಲ್ಲಕ್ಕಿ ಉತ್ಸವ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.