ADVERTISEMENT

ದಾನಮ್ಮಾ ಕಾರ್ತಿಕ ಜಾತ್ರಾ ಮಹೋತ್ಸವ: ಪುರಾಣ ಆರಂಭ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:51 IST
Last Updated 15 ನವೆಂಬರ್ 2024, 14:51 IST
ದೇವರಹಿಪ್ಪರಗಿ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀದಾನಮ್ಮಾದೇವಿ ಕಾರ್ತಿಕ 5ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭಗೊಂಡ ಪುರಾಣ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಶರಣರು ಪುರಾಣಿಕಮಠ ಅವರಿಂದ ಪ್ರವಚನ ಜರುಗಿತು.
ದೇವರಹಿಪ್ಪರಗಿ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀದಾನಮ್ಮಾದೇವಿ ಕಾರ್ತಿಕ 5ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭಗೊಂಡ ಪುರಾಣ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಶರಣರು ಪುರಾಣಿಕಮಠ ಅವರಿಂದ ಪ್ರವಚನ ಜರುಗಿತು.   

ದೇವರಹಿಪ್ಪರಗಿ: ಜೀವನದಲ್ಲಿ ಧರ್ಮ ಮತ್ತು ನೀತಿ ಅಳವಡಿಸಿಕೊಂಡಾಗ ಮಾತ್ರ ಸನ್ಮಾರ್ಗದತ್ತ ತೆರಳಲು ಸಾಧ್ಯ ಎಂದು ಪ್ರವಚನಕಾರ ಶಿವಲಿಂಗಯ್ಯ ಶರಣರು ಪುರಾಣಿಕಮಠ ಹೇಳಿದರು.

ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ದಾನಮ್ಮದೇವಿ ಕಾರ್ತೀಕ ಹಾಗೂ 5ನೇ ಜಾತ್ರಾ ಮಹೋತ್ಸವದ ಅಂಗವಾಗಿ ಆರಂಭಗೊಂಡ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಕ್ತಿ ಎಂಬ ಭಾವ ದೊಡ್ಡದು. ಎಂದಿಗೂ ನಾವು ನಮ್ಮ ಮೂಲ ಮರೆಯಬಾರದು. ಗಡಿಯಾರ ನಿಂತ ಮಾತ್ರಕ್ಕೆ ಕಾಲ ನಿಲ್ಲುವುದಿಲ್ಲ. ಆದ್ದರಿಂದ ಸಮಯಕ್ಕೆ ಕಾಯದೇ ಸತ್ಸಂಗದಲ್ಲಿ ಸೇವೆ ಮಾಡುವು ಅವಕಾಶ ದೊರೆತಾಗ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ADVERTISEMENT

ನ.25 ರವರೆಗೆ ಸಿದ್ಧಿಪುರುಷ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪುರಾಣ ಜರುಗಲಿದ್ದು ಸಮಾರೋಪ ಸಮಾರಂಭಕ್ಕೆ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ. ಎಮ್ಮಿಗನೂರ ಹಂಪಿ ಸಾವಿರ ದೇವರಮಠದ ವಾಮದೇವ ಮಹಾಂತ ಶ್ರೀಗಳಿಂದ ಲಕ್ಷ ದೀಪೋತ್ಸವ ಉದ್ಘಾಟನೆಯಾಗಲಿದೆ.

ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ, ಕಲ್ಯಾಣ ಮಂಟಪದ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ, ಶಾಂತಗೌಡ ಬಿರಾದಾರ(ಯರನಾಳ), ಗೊಲ್ಲಾಳಪ್ಪಗೌಡ ಪಾಟೀಲ, ಅಶೋಕ ಬಬಲೇಶ್ವರ, ಉಮಾಕಾಂತ ಸೊನ್ನದ, ಬಂಡೆಪ್ಪ ಬಿರಾದಾರ(ದಿಂಡವಾರ), ಸಂಗೀತಗಾರ ಶಿವಯ್ಯ ಜೇರಟಗಿ, ತಬಲಾವಾದಕ ಸಾಹೇಬಗೌಡ ಮುಳಸಾವಳಗಿ ಸಹಿತ ಮಹಿಳೆಯರು, ಮಕ್ಕಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.