ವಿಜಯಪುರ: ‘ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಕಿತ್ತೂರು ಚೆನ್ನಮ್ಮ ಅವರ ಹೋರಾಟ, ತ್ಯಾಗ, ಬಲಿದಾನ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭಾನುವಾರ ಕಿತ್ತೂರು ಚೆನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ‘ತಿಹಾಸಿಕ ಕಿತ್ತೂರು ಉತ್ಸವವು ಇದೇ ಅ.23 ರಿಂದ 25 ವರೆಗೆ ಕಿತ್ತೂರಿನಲ್ಲಿ ನಡೆಯಲಿದೆ. ಉತ್ಸವದ ಅಂಗವಾಗಿ ಅ.13 ರಂದು ವಿಜಯ ವೀರಜ್ಯೋತಿ ಯಾತ್ರೆಯು ಬೆಂಗಳೂರಿನಿಂದ ಪ್ರಾರಂಭವಾಗಿದೆ’ ಎಂದರು.
ವಿಜಯಪುರ ನಗರಕ್ಕೆ ಆಗಮಿಸಿದ ವಿಜಯ ವೀರಜ್ಯೋತಿಯನ್ನು ಬರಮಾಡಿಕೊಂಡು ವೀರ ಜ್ಯೋತಿಯ ಪೂಜಾ ಕಾರ್ಯಕ್ರಮ ಕೈಗೊಂಡು, ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ವೀರಜ್ಯೋತಿಯನ್ನು ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಬೀಳ್ಕೊಡಲಾಯಿತು.
ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ತಹಶೀಲ್ದಾರ್ ಕವಿತಾ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಮುಖಂಡರಾದ ಶ್ರೀಶೈಲ್ ಬುಕ್ಕಣ್ಣಿ, ವಿಜಯ್ ಹಿರೊಳ್ಳಿ, ನಿಂಗನಗೌಡ ಸೋಲಾಪೂರ, ಸಿದ್ದು ಅವಟಿ, ಸಂದೀಪ ಇಂಡಿ, ಸದಾಶಿವ ಹಳ್ಳಿಗಿಡದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.