ADVERTISEMENT

ಜನ ಗಣ ಮನ ಬೆಸೆಯೋಣ ಯಾತ್ರೆ ಬಿಜೆಪಿ ಪ್ರಚಾರಕ್ಕಲ್ಲ: ಸೂಲಿಬೆಲೆ

ಜನ ಗಣ ಮನ ಬೆಸೆಯೋಣ ಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:31 IST
Last Updated 6 ಅಕ್ಟೋಬರ್ 2023, 15:31 IST
ಸಿಂದಗಿಯ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ನಮೋ ಬ್ರಿಗೇಡ್ ಜನ ಗಣ ಮನ ಬೆಸೆಯೋಣ ಯಾತ್ರೆಯಲ್ಲಿ ನಮೋ ಬ್ರಿಗೇಡ್‌ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು
ಸಿಂದಗಿಯ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ನಮೋ ಬ್ರಿಗೇಡ್ ಜನ ಗಣ ಮನ ಬೆಸೆಯೋಣ ಯಾತ್ರೆಯಲ್ಲಿ ನಮೋ ಬ್ರಿಗೇಡ್‌ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು   

ಸಿಂದಗಿ: ರಾಮನಾಥ ಕೋವಿಂದ್ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿ ಇಡೀ ದೇಶದ ಜನತೆ ತಲೆ ಭಾಗಿಸುವಂತೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್‌ ಆಶಯಗಳನ್ನು ಈಡೇರಿಸುವಲ್ಲಿ ಯಶಸ್ಸು ಕಂಡವರು ಪ್ರಧಾನಿ ನರೇಂದ್ರ ಮೋದಿ ಎಂದು ನಮೋ ಬ್ರಿಗೇಡ್‌ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿಯ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಗಣ ಮನ ಬೆಸೆಯೋಣ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಈ ಯಾತ್ರೆ ಬಿಜೆಪಿ ಪ್ರಚಾರಕ್ಕಲ್ಲ. ಇದು ನನಗೋಸ್ಕರ, ನಮಗೋಸ್ಕರ ಯಾತ್ರೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಯುವಕರಲ್ಲಿ ಜನಜಾಗೃತಿ ಮೂಡಿಸುವ ಸದುದ್ದೇಶಕ್ಕಾಗಿರುವ ಯಾತ್ರೆಯಾಗಿದೆ. ದೇಶದ ರಾಜಕೀಯದಲ್ಲಿ ಆಗದವರೆಲ್ಲ ಒಟ್ಟಾಗಿ ಸೇರಿ ‘ಡಾಟ್ ಪಾರ್ಟಿ’ ಮಾಡಿಕೊಂಡು ದೇಶವನ್ನು ಚೂರು ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗ ಗಲಭೆ ಸ್ಪಷ್ಟವಾಗಿ ಗೋಚರವಾಗುತ್ತದೆ. ದೇಶದ ನಕ್ಷೆ ಹಸಿರು ಬಣ್ಣಮಯ ಮಾಡಿರುವುದು. ಈದ್ ಮಿಲಾದ್ ಸಂದರ್ಭದಲ್ಲಿ ಔರಂಗಜೇಬ್‌ನ ಚಿತ್ರ ಪ್ರದರ್ಶಿಸಿ ಪ್ರಚೋದನೆ ಮಾಡಿದವರು ಯಾರು. ಅವರಿದ್ದಲ್ಲೆಲ್ಲ ಕಲ್ಲು ಎಸೆಯುವುದು ಸಾಮಾನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಐದು ವರ್ಷದ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರರಿಗೆ 10 ಸಾವಿರ ಕೋಟಿ ಅನುದಾನ ಒದಗಿಸಿಕೊಡುವುದಾಗಿ ಬಹಿರಂಗ ಪಡಿಸಿರುವುದು ಅತ್ಯಂತ ಆಘಾತಕಾರಿ ವಿಷಯ. ನೋಟು ಅಮಾನ್ಯೀಕರಣ ಮಾಡಿದ ನಮ್ಮ ದೇಶ ಚೆನ್ನಾಗಿದೆ. ಆದರೆ ಪಾಕಿಸ್ತಾನ ಈಗ ಭಿಕಾರಿಯಾಗಿದೆ. ಯಾಕೆ..? ಎಂಬುದು ಯೋಚಿಸಲೇಬೇಕಾದ ವಿಷಯವಾಗಿದೆ ಎಂದು ತಿಳಿಸಿದರು.

ಕೋವಿಡ್ ವ್ಯಾಕ್ಸಿನ್ ತಯಾರಿಸಿದ ಐದು ಗಣ್ಯ ರಾಷ್ಟ್ರಗಳಲ್ಲಿ ನಮ್ಮ ದೇಶವೂ ಒಂದಾಗಿದೆ. ಪ್ರಧಾನಿ ಮೋದಿ 100 ರಾಷ್ಟ್ರಗಳಿಗೆ 25 ಕೋಟಿ ವ್ಯಾಕ್ಸಿನ್ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ, ಕಾಂಗ್ರೆಸ್ ನವರು ವ್ಯಾಕ್ಸಿನ್ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.

ದೇವರಹಿಪ್ಪರಗಿ ಪರದೇಶಮಠದ ಶಿವಯೋಗಿದೇವರು ಸ್ವಾಮೀಜಿ ಮಾತನಾಡಿದರು.

ಜನ ಗಣ ಮನ ಯಾತ್ರೆ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎರಡು ಜೆಸಿಬಿ ಯಂತ್ರಗಳಿಂದ ಯಾತ್ರೆಯ ನೇತೃತ್ವ ವಹಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿಕೊಳ್ಳಲಾಯಿತು.

ಯುವ ಬ್ರಿಗೇಡ ಪ್ರಮುಖರಾದ ರಾಜೂ ಪಾಟೀಲ, ಮಡಿವಾಳ ವಾಲೀಕಾರ, ಶಿವೂ ಕಾಟಕರ, ನಿಂಗರಾಜ ಪಾಟೀಲ, ಆಕಾಶ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.