ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶನಿವಾರ ಸಂಜೆ ನಗರದ ಸೆಟ್ ಲೈಟ್ ಬಸ್ ನಿಲ್ಲಾಣದಿಂದ ಹಮ್ಮಿಕೊಂಡ ಪಾರಂಪರಿಕ ಟಾಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಿಷಿ ಆನಂದ ಅವರು, ವಿಶೇಷವಾಗಿ ಅಲಂಕೃತಗೊಂಡ ಪಾರಂಪರಿಕ ಟಾಂಗಾದಲ್ಲಿ ಕುಳಿತು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಮತದಾನ ಜಾಗೃತಿ ಘೋಷಣೆಗಳನ್ನೊಂಡ ಅಲಂಕೃತ 40 ಟಾಂಗಾಗಳಲ್ಲಿ ರಿಷಿ ಆನಂದ ರಾಯಭಾರಿಗಳಾದ ಸಹನಾ ಕೂಡಿಗನೂರ, ಸಾಕ್ಷಿ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯು ಅಧಿಕಾರಿಗಳು, ಸ್ವೀಪ್ ಸಮಿತಿ ಸದಸ್ಯರು ಕುಳಿತು ನಗರದಾದ್ಯಂತ ಸಂಚರಿ ಮತದಾರರ ಗಮನ ಸೆಳೆದರು.
‘ಮಾಡಲೇಬೇಕು-ಮಾಡಲೇಬೇಕು ಮತದಾನ ಮಾಡಲೇಬೇಕು’ ‘ನಮ್ಮ ಮತ ನಮ್ಮ ಹಕ್ಕು’, ‘ಮೇ 7ರಂದು ಕಡ್ಡಾಯವಾಗಿ ಮತದಾನ ಮಾಡಿ’ ‘ಚುನಾವಣಾ ಪರ್ವ ನಮ್ಮ ಗರ್ವ’ ಹೀಗೆ ಹತ್ತು ಹಲವು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಆಯುಕ್ತ ಮಹಾವೀರ ಬೋರಣ್ಣವರ ನೆರೆದ ಎಲ್ಲರಿಗೂ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ಸಿ ಆರ್ ಮುಂಡರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಿಂಗಪ್ಪ ಗೋಠೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.