ADVERTISEMENT

ನಿಡಗುಂದಿ | ಅಗ್ನಿ ಅವಘಡ: ಲಾರಿ ಭಸ್ಮ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 16:14 IST
Last Updated 26 ಡಿಸೆಂಬರ್ 2023, 16:14 IST
ನಿಡಗುಂದಿ ತಾಲ್ಲೂಕಿನ ಉಣ್ಣಿಬಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50 ರಲ್ಲಿನ ದಾಬಾವೊಂದರ ಬಳಿ ಅಗ್ನಿ ದುರಂತಕ್ಕೆ ಹೊತ್ತಿ ಉರಿದ ಗೂಡ್ಸ್ ವಾಹನ
ನಿಡಗುಂದಿ ತಾಲ್ಲೂಕಿನ ಉಣ್ಣಿಬಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50 ರಲ್ಲಿನ ದಾಬಾವೊಂದರ ಬಳಿ ಅಗ್ನಿ ದುರಂತಕ್ಕೆ ಹೊತ್ತಿ ಉರಿದ ಗೂಡ್ಸ್ ವಾಹನ   

ನಿಡಗುಂದಿ: ತಾಲ್ಲೂಕಿನ ಉಣ್ಣಿಭಾವಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಮಂಗಳವಾರ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ತಮಿಳುನಾಡು ಮೂಲದ ಚಾಲಕ ಕಂ ನಿರ್ವಾಹಕ ಚಂದ್ರಶೇಖರ (47) ತೀವ್ರವಾಗಿ ಗಾಯಗೊಂಡಿದ್ದಾರೆ.

ಕೇರಳದಿಂದ ಮಹಾರಾಷ್ಟ್ರದ ಸೊಲ್ಲಾಪುರದೆಡೆಗೆ ಪ್ಲೈವುಡ್ ತುಂಬಿಕೊಂಡು ಹೊರಟಿದ್ದ ಲಾರಿ ಉಣ್ಣಿಭಾವಿ ಕ್ರಾಸ್ ಬಳಿಯ ದಾಬಾವೊಂದರ ಎದುರಿನ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಊಟ ಮಾಡಲೆಂದು ಮರದ ಬುಡ ಕೇಳಗಡೆ ನಿಲ್ಲಿಸಿ ಗೂಡ್ಸ್ ವಾಹನದ ಕ್ಯಾಬಿನ್ ನಲ್ಲಿ ಕುಳಿತು ಅಡುಗೆ ಮಾಡುತ್ತಿರುವಾಗ ಏಕಾಏಕಿ ಅಡುಗೆ ಅನಿಲದಲ್ಲಿ ಸೋರಿಕೆ ಕಂಡು ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಲಾರಿ ಹೊತ್ತಿ ಉರಿದಿದೆ.

ಅಗ್ನಿಶಾಮಕದಳ ಬರಲು ತಡವಾಗಿದ್ದರಿಂದ ಕೂಡಗಿ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಸುಟ್ಟಿತ್ತು. ಘಟನಾ ಸ್ಥಳಕ್ಕೆ ನಿಡಗುಂದಿ ಸಿಪಿಐ ಅಶೋಕ ಚವ್ಹಾಣ, ಪಿಎಸ್ ಐ ಶಿವರಾಜ್ ಧರಿಗೊಂಡ ಭೇಟಿ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.