ADVERTISEMENT

ಹಲ್ಲೆಯಾಗಿದ್ದು ಮಂಗಳಮುಖಿಗಲ್ಲ, ಯುವತಿಗೆ: ಎಸ್‌ಪಿ

ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:10 IST
Last Updated 2 ಆಗಸ್ಟ್ 2024, 0:10 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ವಿಜಯಪುರ: ನಗರದಲ್ಲಿ ಮಂಗಳಮುಖಿಯೊಬ್ಬರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ, ಅಮಾನವೀಯವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

‘ಹಲ್ಲೆಗೊಳಗಾದ ಸಂತ್ರಸ್ತೆಯು ಮಂಗಳಮುಖಿಯಲ್ಲ, ಆಕೆ ವಿಜಯಪುರ ಸಮೀಪದ ಗ್ರಾಮದ ಯುವತಿ. ಪುಣೆಯಲ್ಲಿ ಮಂಗಳಮುಖಿಯರ ಜೊತೆಯಿದ್ದರು. ವೈಯಕ್ತಿಕ ಭಿನ್ನಾಭಿಪ್ರಾಯ ತಲೆದೋರಿ, ಆಕೆಯ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ADVERTISEMENT

‘ಹಲ್ಲೆ ಪ್ರಕರಣದ ಆರೋಪದ ಮೇಲೆ ಮಂಗಳಮುಖಿಯರಾದ ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಬಸವಣ್ಣ ಕ್ಯಾಂಪ್‌ನ ಜಿ.ಹುಲಗೆಮ್ಮ(26), ಮಹಾರಾಷ್ಟ್ರದ ಲಾತೂರು ಜಿಲ್ಲೆಯ ಸತಾಳ ಗ್ರಾಮದ ಕವಿತಾ(26), ಯಾದಗಿರಿ ಜಿಲ್ಲೆ ನಾರಾಯಣಪುರದ ಮಹಾನಮ್ಮ(48), ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕು ಕೊಣ್ಣೂರಿನ ಅಶ್ವಿನಿ(23) ಮತ್ತು ಯಾದಗಿರಿ ಜಿಲ್ಲೆ ಗದ್ದೆಮ್ಮಕಟ್ಟೆಯ ಬಸಮ್ಮ (28) ಎಂಬುವರನ್ನು ಬಂಧಿಸಲಾಗಿದೆ’ ಎಂದರು.

‘ಬೇರೆ ಬೇರೆ ಜಿಲ್ಲೆಯ ಆರೋಪಿಗಳು ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದರು. ಹಲ್ಲೆ ಪ್ರಕರಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ತನಿಖಾ ತಂಡ ರಚಿಸಿ, 24 ಗಂಟೆಗಳಲ್ಲಿ ಐವರನ್ನು ಬಂಧಿಸಲಾಯಿತು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.