ADVERTISEMENT

ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಚಿವರ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:22 IST
Last Updated 29 ಡಿಸೆಂಬರ್ 2023, 15:22 IST
ಬಸವನಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಚಿವ ಶಿವಾನಂದ ಪಾಟೀಲ ಅವರು ದಿಢೀರ್ ಭೇಟಿ ನೀಡಿದರು
ಬಸವನಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಚಿವ ಶಿವಾನಂದ ಪಾಟೀಲ ಅವರು ದಿಢೀರ್ ಭೇಟಿ ನೀಡಿದರು    

ಬಸವನಬಾಗೇವಾಡಿ: ಪಟ್ಟಣದ ತಾಲ್ಲೂಕು ಪಶು ಆಸ್ಪತ್ರೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಶುಕ್ರವಾರ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ದಿಢೀರ್ ಭೇಟಿ ನೀಡಿದಾಗ, ಪಶು ಆಸ್ಪತ್ರೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಸಚಿವರು ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ತಹಶೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರಿಗೆ ಸೂಚಿಸಿದರು.

ನಂತರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದರು. ಕರ್ತವ್ಯಕ್ಕೆ ಇಬ್ಬರು ಅಧಿಕಾರಿಗಳು ಗೈರಾಗಿರುವುದನ್ನು ಗಮನಿಸಿದ ಸಚಿವರು ಕೂಡಲೇ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ದೇವರಹಿಪ್ಪರಗಿಯ ಟಾಸ್ಕ್ ಫೊರ್ಸ್ ಸಭೆ ಬಳಿಕ ಕಚೇರಿಗೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ಅವರನ್ನು ಕಚೇರಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಕುರಿತು ತರಾಟೆಗೆ ತೆಗೆದುಕೊಂಡರು. ನಂತರ ಕಚೇರಿಯ ಕಡತಗಳನ್ನು ಪರಿಶೀಲಿಸಿದ ಸಚಿವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ಕಟಾವ ಪ್ರಯೋಗಗಳನ್ನ ಸರಿಯಾಗಿ ಮಾಡುವಂತೆ ಸೂಚಿಸಿದರು.

ADVERTISEMENT

ಮೊದಲು ಅಖಂಡ ತಾಲ್ಲೂಕಿನ ಒಬ್ಬರೇ ತಹಶೀಲ್ದಾರರು ಸಮರ್ಪಕವಾಗಿ ಕಾರ್ಯ ನಿಭಾಯಿಸುತ್ತಿದ್ದರು. ಸಧ್ಯ, ಕೊಲ್ಹಾರ. ನಿಡಗುಂದಿ ಸೇರಿದಂತೆ ಮೂರು ಜನ ತಹಶೀಲ್ದಾರಗಳಿದ್ದರು ಅಧಿಕಾರಿಗಳು ಕಚೇರಿಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಾಲ್ಲೂಕಿನ ಎಲ್ಲ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮಾಹಿತಿ ನೀಡುವಂತೆ ಬಸವನಬಾಗೇವಾಡಿ ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.