ADVERTISEMENT

ಇಂಡಿ: ಭೀಮಾ ನದಿಗೆ ನೀರು ಆಗ್ರಹಿಸಿ ಶಾಸಕರಿಂದ ಡಿಕೆಸಿಯವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:54 IST
Last Updated 25 ಮಾರ್ಚ್ 2024, 15:54 IST
ಭೀಮಾ ನದಿಗೆ ನೀರು ಬಿಡಲು ಆಗ್ರಹಿಸಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಅಫಜಲಪೂರ ಸಾಸಕ ಎಂ.ವೈ.ಪಾಟೀಲಜಂಟೀಯಾಗಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಇವರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದರು.    
ಭೀಮಾ ನದಿಗೆ ನೀರು ಬಿಡಲು ಆಗ್ರಹಿಸಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಅಫಜಲಪೂರ ಸಾಸಕ ಎಂ.ವೈ.ಪಾಟೀಲಜಂಟೀಯಾಗಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಇವರಿಗೆ ಸೋಮವಾರ ಸಂಜೆ ಮನವಿ ಸಲ್ಲಿಸಿದರು.       

ಇಂಡಿ: ಇಂಡಿ, ಚಡಚಣ, ಆಲಮೇಲ ಮತ್ತು ಅಪಜಲ್ ಪುರ ತಾಲ್ಲೂಕುಗಳಲ್ಲಿ ಹರಿದಿರುವ ಭೀಮಾ ನದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ ಇಂಡಿ ಶಾಖಾ ಕಾಲುವೆಯಿಂದ ಒಂದೂವರೆ ಟಿ.ಎಂ.ಸಿ ನೀರು ಬಿಡಬೇಕು ಎಂದು ಆಗ್ರಹಿಸಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಅಪಜಲಪುರ ಶಾಸಕ ಎಂ.ವೈ.ಪಾಟೀಲರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಿದ್ದಾರೆ.

ಪ್ರಸಕ್ತ ವರ್ಷ ಭೀಕರ ಬರಗಾಲ ಇರುವುದರಿಂದ ನದಿ, ಕೆರೆ ಹಳ್ಳ ಕೊಳ್ಳಗಳು ಜಲಮೂಲಗಳು ಬತ್ತಿಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅತೀವ ತೊಂದರೆ ಯಾಗುತ್ತಿವೆ. ಹೀಗಾಗಿ ಐ.ಬಿ.ಸಿ ಮುಖಾಂತರ ಎಸ್ಕೇಪ್ ಕಿಮಿ 93, 118, 133, 143,160, 167 ಮುಖಾಂತರ ಸುಮಾರು ಪ್ರತಿದಿನ 150 ಕ್ಯೂಸೆಕ್‌ ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿದ್ದಾರೆ.

ಅದರಂತೆ ಮಹಾರಾಷ್ಟ್ರ ಸರ್ಕಾರ ಪ್ರತಿ ವರ್ಷ ಬೇಸಿಗೆಯಲ್ಲಿ ಉಜನಿ ಆಣೆಕಟ್ಟಿನಿಂದ ಎರಡು ಟಿ.ಎಂ.ಸಿ ನೀರು ಬಿಡುತ್ತಿದ್ದರು. ಈ ಬಾರಿ ಬಿಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರಕಾರದ ನೀರಾವರಿ ಕಾರ್ಯದರ್ಶಿಗಳಿಗೆ ಪತ್ರ  ಮತ್ತು ದೂರವಾಣಿ ಮೂಲಕ ಮಾತಾಡಿ ಇಲ್ಲಿಯ ಪರಿಸ್ಥಿತಿ ಮನವರಿಕೆ ಮಾಡಿ ಮಾನವೀಯ ಆಧಾರದ ಮೇಲೆ ನೀರು ಬಿಡಲು ವಿನಂತಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.