ವಿಜಯಪುರ: ಮೊಹರಂ ಭಾವೈಕ್ಯದ ಹಬ್ಬವಾಗಿದ್ದು, ಈ ಆಚರಣೆಯಲ್ಲಿ ಮುಸ್ಲಿಮೇತರರು ಹೆಚ್ಚಾಗಿ ಭಾಗವಹಿಸಿ ಹರಕೆ ಹೊತ್ತಿರುತ್ತಾರೆ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಮಹಾದೇವ ಶಿವಾಚಾರ್ಯ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಗೆಳೆಯರ ಬಳಗ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮುಂಗಾರು ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು.
ಬಿಎಲ್‍ಡಿಇ ಸಂಸ್ಥೆಯ ನಿರ್ದೇಶಕ ಬಸವನಗೌಡ ಎಂ. ಪಾಟೀಲ ಮಾತನಾಡಿ, ‘ನಮ್ಮ ಕುಟುಂಬವು ಲಾಲಸಾಹೇಬರ ಆಶೀರ್ವಾದದಿಂದ ಸುಖ ಸಮೃದ್ಧಿಯನ್ನು ಹೊಂದಿದ್ದೇವೆ. ತಿಗಣಿಬಿದರಿ ಗ್ರಾಮ ಮೊಹರಂ ಆಚರಣೆಗೆ ಪ್ರಾಮುಖ್ಯತೆಯನ್ನು ಹೊಂದಿದೆ’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು.
ಹುಬ್ಬಳ್ಳಿಯ ಪ್ರಣೀತಿ ರಾವ ಜಾನಪದ ಸಂಗೀತ, ದಿಕ್ಷಾ ಬೀಸೆ ತಂಡ ಜಾನಪದ ನೃತ್ಯ, ಸೂಪಿಯಾ ಬಿಜಾಪುರ ಕನ್ನಡ ಗೀತೆ ಹಾಗೂ ಗೋಪಾಲ ಇಂಚಗೇರಿ, ಗೋಪಾಲ ಹೂಗಾರ ಅವರಿಂದ ನಗೆಹಬ್ಬ ಜರುಗಿದವು.
ಚನ್ನಪ್ಪ ಕೊಪ್ಪದ, ಮಹೇಶ ಮಾಳಿ, ಅಪ್ಪಾಸಾಹೇಬ ಹುಬ್ಬಳ್ಳಿ, ಅರ್ಜುನ ದೇವಕ್ಕಿ, ಮೋಸಿಂಪೀರ ಮುಜಾವರ, ಲಾಲಸಾಬ ಕಮತೆ, ಮಹಮ್ಮದಗೌಸ ಹವಾಲ್ದಾರ, ರಾಜೇಸಾಬ ಶಿವನಗುತ್ತಿ, ಅಕ್ಷಯ ಕುಲಕರ್ಣಿ, ಆನಂದ ಮೋಕಾಶಿ, ಖಾಜಾಪಟೇಲ ಪಾಟೀಲ, ಮಹಾದೇವ ಹರಿಜನ, ರಾಜುಗೌಡ ಬಿರಾದಾರ, ಮಕಬುಲ್ ಖೇಜಿ, ಮಮತಾಜಅಲಿ ದಳವಾಯಿ, ಅಲ್ಲಾಬಕ್ಷ ಡಪಳಾಪೂರ, ಆನಂದ ಬಿರಾದಾರ, ಜ್ಯೋತಿಬಾ ಪವಾರ, ಚಿದಾನಂದ ಬಿರಾದಾರ, ನಿಂಗನಗೌಡ ಬಿರಾದಾರ, ಪೈಗಂಬರ ಪಟೇಲ, ವಜೀರ ಆಲಗೂರ, ಚಂದ್ರಶೇಖರ ಮಾಳಿ, ಚಂದ್ರಶೇಖರ ಚಲುವಾದಿ, ಶಾಂತಪ್ಪ ಕೊಕಟನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.