ADVERTISEMENT

ಮುದ್ದೇಬಿಹಾಳ | ಅಸ್ವಸ್ಥಗೊಂಡರೂ ಪರೀಕ್ಷೆಗೆ ಹಾಜರು!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 15:54 IST
Last Updated 2 ಏಪ್ರಿಲ್ 2024, 15:54 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮುದ್ದೇಬಿಹಾಳ: ಪಟ್ಟಣದ ಎಂ.ಜಿ.ಎಂ.ಕೆ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದ ಎಸ್.ಎಸ್.ಎಲ್.ಸಿ ಗಣಿತ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬರು ತೀವ್ರ ಅನಾರೋಗ್ಯಕ್ಕೀಡಾಗಿದ್ದರೂ, ಪರೀಕ್ಷೆಗೆ ಹಾಜರಾದರು.

ಮುದ್ದೇಬಿಹಾಳ ಶಾರದಾ ಪ್ರೌಢಶಾಲೆ ವಿದ್ಯಾರ್ಥಿನಿ ಪುಷ್ಪಾ ಬಿರಾದಾರ ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥರಾಗಿದ್ದರು. ತಕ್ಷಣ, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಗ್ಲುಕೋಸ್‌ ಡ್ರಿಪ್ ಹಾಕಲಾಗಿತ್ತು. ನಂತರ ಚೇತರಿಸಿಕೊಂಡ ವಿದ್ಯಾರ್ಥಿನಿ, ಪರೀಕ್ಷೆ ಬರೆಯುವುದಾಗಿ ತಿಳಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.

ADVERTISEMENT

ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ಬಾಗಲಕೋಟ ಸಿಟಿಇ ಕೇಂದ್ರದ ಪ್ರಾಚಾರ್ಯ ಜಗದೀಶ್ವರ ಬಿ.ಎಸ್, ಬಿಇಒ ಬಿ.ಎಸ್.ಸಾವಳಗಿ, ಪಿಇಒ ಬಿ.ವೈ.ಕವಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದ ಅಧೀಕ್ಷಕ ರುದ್ರೇಶ ಕಿತ್ತೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.