ADVERTISEMENT

ಮುದ್ದೇಬಿಹಾಳ | ಕೋರ್ಟ್ ಮುಂದೆ ಹಲ್ಲೆ: 8 ಜನರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 14:41 IST
Last Updated 12 ಜೂನ್ 2024, 14:41 IST

ಮುದ್ದೇಬಿಹಾಳ : ಪಟ್ಟಣದ ನ್ಯಾಯಾಲಯದ ಮುಂದೆ ವ್ಯಕ್ತಿಯೊಬ್ಬನಿಗೆ ರಾಡ್‌ನಿಂದ ಹಲ್ಲೆಗೈದ ಘಟನೆಗೆ ಸಂಬಂಧಿಸಿದಂತೆ ಎಂಟು ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಯರಝರಿಯ ಸಂತೋಷ ತಿಪ್ಪಣ್ಣ ಕಾಡಮಗೇರಿ ಎಂಬಾತ ಮುದ್ದೇಬಿಹಾಳದ ನ್ಯಾಯಾಲಯಕ್ಕೆ ವಕೀಲರನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ಭೀಮಪ್ಪ ಕರಳ್ಳಿ ಎಂಬುವವರ ಪತ್ನಿಯನ್ನು ಮಾತನಾಡಿಸಿದ್ದಕ್ಕೆ ಉಳಿದವರನ್ನೆಲ್ಲ ಗುಂಪುಗೂಡಿಸಿಕೊಂಡು ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಾಯಾಳು ಸಂತೋಷ ಕಾಡಮಗೇರಿ ತಿಳಿಸಿದ್ದಾರೆ.  ಜಾಯವಾಡಗಿಯ ಭೀಮಪ್ಪ ಸಾಬಣ್ಣ ಕರಳ್ಳಿ,ನಿಂಗಪ್ಪ ಸೋಮಣ್ಣ ಕರಳ್ಳಿ,ಬಸಪ್ಪ ಹೊನ್ನಪ್ಪ ಕರಳ್ಳಿ,ಶಂಕ್ರಪ್ಪ ಹೊನ್ನಪ್ಪ ಕರಳ್ಳಿ,ಯಲ್ಲಪ್ಪ ಹೊನ್ನಪ್ಪ ಕರಳ್ಳಿ,ಮಲ್ಲಪ್ಪ ಶಿವಪ್ಪ ಕರಳ್ಳಿ,ಸೋಮಪ್ಪ ನಿಂಗಪ್ಪ ಕರಳ್ಳಿ,ಶಿವಪ್ಪ ನಿಂಗಪ್ಪ ಕರಳ್ಳಿ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.

ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗಾಯಾಳುವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.