ADVERTISEMENT

ಮಠಗಳಿಂದ ಸಾಮಾಜಿಕ ಕಾರ್ಯ

ಮಹೇಶಾನಂದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 16:47 IST
Last Updated 17 ಡಿಸೆಂಬರ್ 2020, 16:47 IST
ಹೊರ್ತಿ ಸಮೀಪದ ಕಾತ್ರಾಳ-ಬಾಲಗಾಂವದ ಗುರುದೇವಾಶ್ರಮದಲ್ಲಿ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಇಚಲಕರಂಜಿಯ ಮಹೇಶಾನಂದ ಸ್ವಾಮೀಜಿ ಮಾತನಾಡಿದರು
ಹೊರ್ತಿ ಸಮೀಪದ ಕಾತ್ರಾಳ-ಬಾಲಗಾಂವದ ಗುರುದೇವಾಶ್ರಮದಲ್ಲಿ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಇಚಲಕರಂಜಿಯ ಮಹೇಶಾನಂದ ಸ್ವಾಮೀಜಿ ಮಾತನಾಡಿದರು   

ಹೊರ್ತಿ: ಮಠ ಹಾಗೂ ಆಶ್ರಮಗಳು ಸಮಾಜಮುಖಿ ಕಾರ್ಯಗಳ ಜತೆ ಅಧ್ಯಾತ್ಮಿಕ ಪ್ರವಚನ, ಚಿಂತನ-ಮಂಥನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಇಚಲಕರಂಜಿಯ ಮಹೇಶಾನಂದ ಸ್ವಾಮೀಜಿ ಹೇಳಿದರು.

ಕಾತ್ರಾಳ- ಬಾಲಗಾಂವದ ಗುರುದೇವಾಶ್ರಮದಲ್ಲಿ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರು
ದೇವಾಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ, ರೈತರಿಗಾಗಿ ಕೃಷಿ ಕಾರ್ಯಕ್ರಮ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಶ್ರಮದ ಡಾ. ಅಮೃತಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಗೋಶಾಲೆಯಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ಜನರ ಸಹಕಾರದೊಂದಿಗೆ 300ಕ್ಕೂ ಅಧಿಕ ಗೋವುಗಳನ್ನು ಸಾಕಲಾಗುತ್ತಿದೆ ಎಂದರು.

ಕಾತ್ರಾಳ-ಬಾಲಗಾಂವದ ಗುರುದೇವಾಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಮಾತನಾಡಿ, ಈ ಆಶ್ರಮದಲ್ಲಿ ಮೂರು ತಿಂಗಳು ಸಿದ್ಧೇಶ್ವರ ಸ್ವಾಮೀಜಿಯವರ ವಾಸ್ತವ್ಯ ಹಾಗೂ ಅಧ್ಯಾತ್ಮಿಕ ಚಿಂತನೆ– ಪ್ರವಚನ ನಡೆಯುವುದಕ್ಕೆ ಇಲ್ಲಿನ ಜನರ ಭಕ್ತಿ ಹಾಗೂ ಶ್ರದ್ಧೆ ಹಾಗೂ ಅಪಾರ ಸೇವಾ ಮನೋಭಾವನೆ ಕಾರಣ. ಮೂರು ತಿಂಗಳ ಕಾಲ ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನ ಕಾರ್ಯಕ್ರಮ ನಡೆದಿಲ್ಲ, ಆದರೆ ಗುರುದೇವಾಶ್ರಮದಲ್ಲಿ ಇಷ್ಟೊಂದು ದಿನಗಳವರೆಗೆ ಶ್ರೀಗಳ ದರ್ಶನ ಹಾಗೂ ಅವರ ಪ್ರವಚನ ದ ಅಮೃತವಾಣಿ ಲಭಿಸಿರುವುದು ಸೌಭಾಗ್ಯ ಎಂದರು.

ADVERTISEMENT

ಗುರುದೇವಾಶ್ರಮದ ಸೇವಾ ಸಮಿತಿ ಸದಸ್ಯ ರಮೇಶ ಕರೋಶಿ ಮಾತನಾಡಿದರು. ವಿಜಯಪೂರ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಸ್ವಾಮೀಜಿ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಡಾ.ಅಮೃತಾನಂದ ಸ್ವಾಮೀಜಿ, ಡಾ. ಶ್ರದ್ಧಾನಂದ ಸ್ವಾಮೀಜಿ, ಸಂದೀಪ ಗುರುಜಿ, ಯೋಗಾನಂದ ಸ್ವಾಮೀಜಿ, ಶಿಕ್ಷಕ ರಮೇಶ ಕರೋಶಿ, ಸಾಯಬಣ್ಣ ಮುಚ್ಚಂಡಿ, ನಿವೃತ್ತ ಶಿಕ್ಷಕ ಕೆ.ಎಸ್. ಬಿರಾದಾರ ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು. ರಮೇಶ ಕರೋಶಿ ಸ್ವಾಗತಿಸಿ, ನಿರೂಪಿಸಿದರು.ಕೆ.ಎಸ್.ಬಿರಾದಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.