ADVERTISEMENT

ನಾಗರಬಾವಿ ಕುಂಟೆ ದುರಸ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 6:22 IST
Last Updated 20 ಜೂನ್ 2018, 6:22 IST
ನಾಗರಬಾವಿ ಕುಂಟೆಯಲ್ಲಿ ಮಣ್ಣಿನಿಂದ ಹೂಳು ತುಂಬಿರುವುದು
ನಾಗರಬಾವಿ ಕುಂಟೆಯಲ್ಲಿ ಮಣ್ಣಿನಿಂದ ಹೂಳು ತುಂಬಿರುವುದು   

ವಿಜಯಪುರ: ಇಲ್ಲಿನ ನಾಗರಭಾವಿ ಕುಂಟೆಯ ಅಭಿವೃದ್ಧಿಗಾಗಿ ಹಿಂದಿನ ಶಾಸಕ ಪಿಳ್ಳಮುನಿಶಾಮಪ್ಪ ₹5 ಲಕ್ಷಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈವರೆಗೂ ಕುಂಟೆಯ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ವಿಜಯಪುರದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ ಮಾರ್ಗದ ಮಧ್ಯೆ ಇರುವ ನಾಗರಭಾವಿ ಕುಂಟೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಕಲ್ಲುಗಳೆಲ್ಲ ಬಿದ್ದು ಹೋಗುತ್ತಿವೆ ಎಂದು ತಿಳಿಸಿದರು.

ಹಲವಾರು ಬಾರಿ ಕುಂಟೆಯು ತುಂಬಿ ಹೋಗಿದ್ದರೂ ನೀರು ನಿಲ್ಲದೆ ಬತ್ತಿಹೋಗುತ್ತಿದೆ. ಗಣೇಶ ಚತುರ್ಥಿ ಬಂದು ಮುಗಿದುಹೋದ ನಂತರ ಗಣಪತಿ ಮೂರ್ತಿಗಳನ್ನು ನೀರಿದ್ದಾಗ ಇದೇ ಕುಂಟೆಯಲ್ಲಿ ವಿಸರ್ಜನೆ ಮಾಡುವುದರಿಂದ ಮಣ್ಣಿನ ಹೂಳು ತುಂಬಿದೆ ಎಂದರು.

ಗಿಡಗಂಟಿಗಳು ಬೆಳೆದು ನಿಂತು ಕುಂಟೆ ಹಾಳಾಗಿದೆ. ಮಳೆಗಾಲ ಆರಂಭ ವಾಗಿದ್ದು, ಸುತ್ತಲಿನ ಹೊಲಗದ್ದೆಗಳಲ್ಲಿ ಮಳೆಯ ನೀರು ಸಂಗ್ರಹವಾಗುತ್ತಿವೆ. ಇದರಿಂದ ರೈತರಿಗೂ ಅನಾನುಕೂಲ ವಾಗುತ್ತದೆ ಎಂದರು. ಶೀಘ್ರವಾಗಿ ಕುಂಟೆಯನ್ನು ದುರಸ್ತಿ ಮಾಡಿ, ನೀರು ಶೇಖರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು. ನಾಗರಬಾವಿ ಕುಂಟೆಯ ಸುತ್ತಲೂ ಕಲ್ಲಿನ ತಡೆಗೋಡೆಯನ್ನು ನಿರ್ಮಾಣ ಮಾಡು ವುದರ ಜೊತೆಗೆ, ಸುತ್ತಲೂ ಜಾಲರಿ ನಿರ್ಮಾಣ ಮಾಡಬೇಕು. ಇದರಿಂದ ಅದು ಕಲ್ಯಾಣಿಯಂತೆ ಕಂಗೊಳಿಸಲಿದ್ದು ಇಲ್ಲಿ ಸಂಚರಿಸುವ ಜನರ ಮನಸ್ಸಿಗೆ ಮುದ ನೀಡಲಿದೆ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳೀಯ ನಿವಾಸಿ ರಮೇಶ್ ಮಾತನಾಡಿ, ಊರಿನಲ್ಲಿ ಸತ್ತು ಹೋಗಿರುವ ನಾಯಿಗಳನ್ನು ತಂದು ಇದರಲ್ಲಿ ಹಾಕುತ್ತಾರೆ. ರಾತ್ರಿಯ ವೇಳೆ ನಾಗರಬಾವಿ ಕುಂಟೆಯ ಸುತ್ತಲಿನ ಪ್ರದೇಶದಲ್ಲಿ ಮದ್ಯಪಾನ ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.. ಸಂಬಂಧಪಟ್ಟ ಪುರ ಸಭೆಯ ಅಧಿಕಾರಿಗಳು, ಶಾಸಕರು ಈ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.