ADVERTISEMENT

ನಾಲತವಾಡ ಜಾಮೀಯಾ ಮಸೀದಿ: ಶಾಸಕ ಎ.ಎಸ್‌.ನಡಹಳ್ಳಿ ಅವರಿಂದ ಇಫ್ತಿಯಾರ್‌ ಕೂಟ

ಧರ್ಮ ಬದಿಗೊತ್ತಿ ಸಹೋದರರಂತೆ ಬಾಳೋಣ: ಶಾಸಕರಿಂದ ಕರೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 15:38 IST
Last Updated 22 ಏಪ್ರಿಲ್ 2022, 15:38 IST
ನಾಲತವಾಡದ ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ತಾವು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಶಾಸಕ ನಡಹಳ್ಳಿ ಅವರು ಭಾಗವಹಿಸಿದ್ದರು
ನಾಲತವಾಡದ ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ತಾವು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಶಾಸಕ ನಡಹಳ್ಳಿ ಅವರು ಭಾಗವಹಿಸಿದ್ದರು   

ನಾಲತವಾಡ: ‘ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾದ ನಾಲತವಾಡ ಪಟ್ಟಣ ಸೇರಿದಂತೆ ನನ್ನ ಮತಕ್ಷೇತ್ರದಲ್ಲಿ ಸಮುದಾಯಗಳ ಮಧ್ಯೆ ಜಾತಿ, ಧರ್ಮದಹೆಸರಲ್ಲಿ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು, ಜಾತಿ ಧರ್ಮ ಬದಿಗೊತ್ತಿಎಲ್ಲರೂ ಸಹೋದರರಂತೆ ಬಾಳೋಣ’ ಎಂದು ಶಾಸಕ ಹಾಗೂ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಸ್ಥಳಿಯ ಜಾಮಿಯಾ ಮಸೀದಿಯಲ್ಲಿ ತಾವು ಏರ್ಪಡಿಸಿದ್ದ ಇಫ್ತಿಯಾರ್ ಕೂಟಕ್ಕೆ ಚಾಲನೆ ನೀಡಿ ನಂತರ ಕಮೀಟಿ ವತಿಯಿಂದ ಏರ್ಪಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನನ್ನ ಮತಕ್ಷೇತ್ರದಲ್ಲಿ ಎಲ್ಲರೂ ನನಗೆ ಸಮಾನರು, ಪ್ರಚೋದನಾಕಾರಿ ಹೇಳಿಕೆಗಳು ಸೇರಿದಂತೆ ಜಾತಿ ಹೆಸರಲ್ಲಿ ಘಟನೆಗಳು ಕಂಡು ಬಂದರೆ ಸಹಿಸಲ್ಲ ಎಂದರು.

ADVERTISEMENT

25 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಈಗಾಗಲೇ ಪಟ್ಟಣದ ಅಭಿವೃದ್ದಿಗೆ ₹ 8 ಕೋಟಿ ಅನುದಾನ ಖರ್ಚು ಮಾಡುತ್ತಿದ್ದೇವೆ,ಸದ್ಯದಲ್ಲೇ ₹2 ಕೋಟಿ ಅನುದಾನ ನೀಡಲಿದ್ದೇನೆ, ಎಲ್ಲರಿಗೂ ಸೂರು ಒದಗಿಸುವ ಉದ್ದೇಶದಿಂದ 800 ಮನೆಗಳನ್ನು ತಂದಿದ್ದೇನೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕಾರ ನೀಡಿ ಎಂದರು.

ಮುಂದಿನ ಚುನಾವಣೆಯಲ್ಲಿ ಪಕ್ಷ ಭೇದ ಮರೆತು ಉತ್ತಮರನ್ನು ಆಯ್ಕೆ ಮಾಡಿ ಎಂದರು.

ಬಿಜೆಪಿ ಮುಖಂಡರಾದ ಎಂ.ಎಸ್.ಪಾಟೀಲ ಹಾಗೂ ಮೌಲಾನಾ ಮಹ್ಮದಗೌಸ್ ಸಿಕ್ಕಲಗಾರ ಮಾತನಾಡಿದರು.

ಇಫ್ತಿಯಾರ್ ಕೂಟದ ಕಾರ್ಯಕ್ರಮದಲ್ಲಿ ಸರ್ಕಾರಿ ಉರ್ದು ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಜಾಕಸಾಬ ನಾಡದಾಳ, ಅಲ್ಲಾಬಕ್ಷ ಕುಳಗೇರಿ, ಅಲ್ತಾಫ್ ಕೊಣ್ಣೂರ ಹಾಗೂ ಯಾಕೂಬಲಿ ಮುದ್ದೇಬಿಹಾಳ ಶಾಸಕರನ್ನು ಸನ್ಮಾನಿಸಿದರು.

ಇದೇ ವೇಳೆ ಕಳೆದ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದ ಅಂಜುಮನ್ ಸಮಿತಿಯ ಶಾದಿ ಮಹಲ್ ಅಭಿವೃದ್ದಿಗೆ ಸುಮಾರು ₹ 30 ಲಕ್ಷ ಅನುದಾನ ನೀಡಿ ಎಂದು ಸಮಿತಿಯ ಅಬ್ದುಲಗನಿ ಖಾಜಿ, ಇಬ್ರಾಯಿಂ ಮುಲ್ಲಾ, ಉಪಾಧ್ಯಕ್ಷ ಬಾಷೇಸಾಬ್ ತಗ್ಗಿನಮನಿ, ಅಲ್ಲಾಬಕ್ಷ ಕುಳಗೇರಿ, ಅಲ್ತಾಪ ಕೊಣ್ಣೂರ ಶಾಸಕ ನಡಹಳ್ಳಿ ಅವರಿಗೆ ಸನ್ಮಾನಿಸಿ ಮನವಿ ಸಲ್ಲಿಸಿದರು, ಸ್ಪಂದಿಸಿದ ಶಾಸಕರು ಶೀಘ್ರವೇ ₹ 30 ಲಕ್ಷ ಅನುದಾನ ನೀಡುವೆ ಎಂದು ಭರವಸೆ ನೀಡಿದರು.

ಬಸಣ್ಣ ವಡಗೇರಿ, ಚಾಲಕರ ಸಂಘದ ಒಕ್ಕೂಟದ ಅಧ್ಯಕ್ಷ ಶರಣಪ್ಪ ಗಂಗನಗೌಡ್ರ, ಬಸವರಾಜ ಇಲಕಲ್, ಚಂದ್ರಶೇಖರ ಗಂಗನಗೌಡ್ರ, ಸಂಗಣ್ಣ ಹಾವರಗಿ, ಅಬ್ದುಲಗನಿ ಖಾಜಿ, ಇಬ್ರಾಯಿಂ ಮುಲ್ಲಾ,ಕೆ.ಆರ್.ಎತ್ತಿನಮನಿ, ರಜಾಕಸಾಬ್ ನಾಡದಾಳ, ಅಲ್ಲಾಬಕ್ಷ ಕುಳಗೇರಿ, ಬಾಷೇಸಾಬ ತಗ್ಗಿನಮನಿ,ಮೌ.ದಾವಲ ತಗ್ಗಿನಮನಿ, ಖಾಜಾಹುಸೆನ್ ಖತೀಬ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.