ADVERTISEMENT

ಮಹಾನ್‌ ಪುರುಷರ ಆದರ್ಶ ಪಾಲಿಸಿ: ತೇಜಸ್ವಿನಿ ಸೊಗಲದ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:31 IST
Last Updated 12 ಜನವರಿ 2024, 15:31 IST
ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಉದ್ಘಾಟಿಸಿದರು
ಬಸವನಬಾಗೇವಾಡಿಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಉದ್ಘಾಟಿಸಿದರು   

ಬಸವನಬಾಗೇವಾಡಿ: ‘ಯುವಕರು ಈ ದೇಶದ ಆಸ್ತಿ. ಪ್ರತಿಯೊಬ್ಬರೂ ತಮ್ಮ ಜವಾಬ್ಧಾರಿ ಅರಿತು  ಉನ್ನತ ಗುರಿಯನ್ನಿಟ್ಟುಕೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು’ ಎಂದು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.

ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಮ್ಮ ಗುರಿ ಉನ್ನತವಾಗಿರಬೇಕು. ಸಾಧನೆಗೆ ಸಮಯ ತೆಗೆದುಕೊಳ್ಳತ್ತದೆ. ಆದರೆ ಛಲ ಬಿಡಬಾರದು. ಮಹಾನ್ ಪುರುಷರ ಜೀವನ, ಆದರ್ಶಗಳನ್ನು ತಿಳಿದುಕೊಳ್ಳಬೇಕು’ ಎಂದರು.

ADVERTISEMENT

ವಕೀಲ ಎಸ್.ಎಸ್.ಹೆಗಡ್ಯಾಳ ಮಾತನಾಡಿ,  ಸ್ವಾಮಿ ವಿವೇಕಾನಂದರಿಗೆ ಯುವಕರ ಮೇಲೆ ಹೆಚ್ಚಿನ ಭರವಸೆ ಇತ್ತು. ಯುವಕರು ಇಚ್ಛಾಶಕ್ತಿ, ವಿವೇಚನಾ ಶಕ್ತಿ ಬೆಳಸಿಕೊಳ್ಳಬೇಕು. ಕೆಟ್ಟ ವ್ಯಸನಗಳಿಂದ ದೂರವಿರಬೇಕು. ಉದಾತ್ತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಉನ್ನತ ಆದರ್ಶಗಳೊಂದಿಗೆ ದೇಶ ಕಟ್ಟಲು ಮುಂದಾಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಹುಲ್ ಸಾಹ, ರಾಜರಾಜೇಶ್ವರಿ ಅಶೋಕ ಸುತಾರ, ಸರ್ಕಾರಿ ಪಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನೀಲಪ್ಪ ಹೊಸಮನಿ, ವಕೀಲರಾದ ಬಿ.ಆರ್.ಅಡ್ಡೊಡಗಿ, ವಿ.ಬಿ.ಮರ್ತುರ ಇದ್ದರು.

ಉಪನ್ಯಾಸಕ ಆರ್.ಬಿ.ಐನಾಪುರ ಸ್ವಾಗತಿಸಿದರು, ಎಸ್.ವಿ.ಅಗಸರ ನಿರೂಪಿಸಿದರು,ಎಸ್.ಎಸ್.ಸಜ್ಜನ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.