ವಿಜಯಪುರ: ಅನೇಕ ಪ್ರಯತ್ನಗಳ ನಂತರ ಬಸವಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ರಾಜ್ಯಮಟ್ಟದ ಬಸವ ಜಯಂತೋತ್ಸವ ಆಚರಣೆಯಾಯಿತು. ಆದರೆ, ಆಡಳಿತಾರೂಢ ಪಕ್ಷದ ಯಾವೊಬ್ಬ ಸಚಿವರು, ಶಾಸಕರು ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ, ಇದು ಬಿಜೆಪಿ ನಾಯಕರ ಬಸವ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದ ಬಸವ ಜಯಂತೋತ್ಸವಕ್ಕೆ ಗೈರಾಗುವ ಮೂಲಕ ಬಿಜೆಪಿಗರು ತಮಗೆಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಲ್ಲ, ಮನುವಾದ, ಗೋಡ್ಸೆವಾದದಲ್ಲಿ ನಂಬಿಕೆ ಇದೆ ಎಂದು ಮತ್ತೊಮ್ಮೆ ನಿರೂಪಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇವಲ ಕಾಟಾಚಾರಕ್ಕೆ ಬಸವೇಶ್ವರ ಜಯಂತೋತ್ಸವ ಆಚರಣೆಯಾಗಿದ್ದು ಸಮಸ್ತ ಬಸವಾಭಿಮಾನಿಗಳಿಗೆ ನೋವುಂಟಾಗಿದೆ. ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜ್ಯದ ಜನತೆಯ ಬಹಿರಂಗ ಕ್ಷಮೆಯಾಚಿಸಬೇಕು ಎಂದು ರಾಠೋಡ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.