ADVERTISEMENT

ಅಲಮೇಲ: ಅಭಿವೃದ್ಧಿಗೆ ಕಾದಿರುವ ಕೋರಳ್ಳಿ  

ರಮೇಶ ಎಸ್.ಕತ್ತಿ
Published 4 ಸೆಪ್ಟೆಂಬರ್ 2024, 5:53 IST
Last Updated 4 ಸೆಪ್ಟೆಂಬರ್ 2024, 5:53 IST
ಕೋರಹಳ್ಳಿ ಗ್ರಾಮದ ರಸ್ತೆ ಹಾಳಾಗಿರುವುದು
ಕೋರಹಳ್ಳಿ ಗ್ರಾಮದ ರಸ್ತೆ ಹಾಳಾಗಿರುವುದು   

ಅಲಮೇಲ: ಅಲಮೇಲ ಸಿಂದಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದೊಡ್ಡಹಳ್ಳಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಹೊಂದಿರುವ ಕೋರಳ್ಳಿ ತಾಲ್ಲೂಕು ಪಂಚಾಯಿತಿ ಕೇಂದ್ರವೂ ಆಗಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

3,500 ಜನಸಂಸಖ್ಯೆ ಹೊಂದಿರುವ ಕೋರಹಳ್ಳಿ 2 ವಾರ್ಡ್‌ಗಳನ್ನು ಹೊಂದಿದೆ. ಬಳಗಾನೂರ, ಆಲಮೇಲ, ಮದರಿಗೆ ಹೋಗುವ ಮೂರು ರಸ್ತೆಗಳು ಈ ಗ್ರಾಮವನ್ನು ಸಂಪರ್ಕಿಸುತ್ತವೆ. ಚಿಕ್ಕ ರಸ್ತೆಗಳಿವೆ. ರಸ್ತೆಗಳು ಕೆಸರಮಯವಾಗಿವೆ. ರಸ್ತೆಯಲ್ಲಿಯೇ ಕೊಳಚೆ ನೀರು ಹರಿಯುತ್ತವೆ.

ಬಯಲೇ ಶೌಚಾಲಯ: ಇಲ್ಲಿನ ಬಹುತೇಕ ಕುಟುಂಬಗಳು ಶೌಚಕ್ಕೆ ಬಯಲನ್ನೇ ಅವಲಂಬಿಸಿವೆ. ಸಾರ್ವಜನಿಕ ಶೌಚಾಲಯಗಳು ಸುಸಜ್ಜಿತವಾಗಿಲ್ಲ. ಆಲಮೇಲ ಮುಖ್ಯ ರಸ್ತೆಗೆ ಹೊಂದಿ ಕೊಂಡು ಮಹಿಳಾ ಶೌಚಾಲಯ ನಿರ್ಮಿಸಿ ದ್ದರೂ ಅದು ಉಪಯೋಗಕ್ಕೂ ಬಾರದಂತಾಗಿದೆ. ಅತ್ಯಾಧುನಿಕ ಶೌಚಾಲಯಗಳ ನಿರ್ಮಾಣ ಮಾಡಬೇಕೆಂದು ಮಾದೇವ ಶಿವಪೂರ, ಸುಭಾಸಗೌಡ ಪಾಟೀಲ, ಮಹಾದೇವಪ್ಪಗೌಡ ಬಿರಾದಾರ, ರುದ್ರಗೌಡ ಹಿಪ್ಪರಗಿ ಮುಂತಾದವರು ಒತ್ತಾಯಿಸಿದ್ದಾರೆ.

ADVERTISEMENT

ಹಾಳಾದ ಗ್ರಂಥಾಲಯ: ಗ್ರಾಮ ಪಂಚಾಯಿತಿ ಗ್ರಂಥಾಲಯ ಹೆಸರಿಗೆ ಮಾತ್ರ ಇದ್ದು, ಅದು ಬಾಗಿಲು ತೆರೆಯುವುದೇ ಅಪರೂಪ, ಸಾಕಷ್ಟು ವಿದ್ಯಾವಂತರಿರುವ ಈ ಗ್ರಾಮದಲ್ಲಿ ಸರ್ಕಾರದಿಂದ ಬಂದ ಪತ್ರಿಕೆಗಳು, ಕೋರಳ್ಳಿ ಗ್ರಾಮದ ರಸ್ತೆಗಳು ಡಾಂಬ‌ರ್ ಕಾಣದಿರುವುದು, ಪುಸ್ತಕಗಳ ಸೌಕರ್ಯ ಯಾರಿಗೂ ಸಿಗುತ್ತಿಲ್ಲ ಎಂಬ ಆರೋಪವೂ ಇದೆ.

ಕೇಂದ್ರ ಗ್ರಂಥಾಲಯ ಪುಸ್ತಕಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೀಡಿದೆ. ಆದರೂ ಅವುಗಳು ಓದುಗರಿಲ್ಲದೇ ದಕ್ಕಿಲ್ಲ. ನಿತ್ಯವೂ ಗ್ರಂಥಾಲಯ ಬಾಗಿಲು ತೆರೆಯುವಂತಾಗಬೇಕು. ಪರಿಶಿಷ್ಟ ಯೋಜನೆಯಲ್ಲಿ ಒಂದರೆಡು ಕಡೆ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಉಳಿದೆಲ್ಲ ಕಡೆ ಸುಸಜ್ಜಿತ ರಸ್ತೆ ಆಗಬೇಕು, ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಹಳೆ ಕಾಲದ ಕೋಣೆಗಳಲ್ಲಿ ತರಗತಿಗಳು ನಡೆಯುತ್ತಿವೆ.

ಹೊಸ ಕಟ್ಟಡದ ಅವಶ್ಯಕತೆ ಮತ್ತು ಆವರಣಕ್ಕೆ ಕಾಂಪೌಂಡ್ ನಿರ್ಮಿಸಬೇಕು. ವಿದ್ಯಾರ್ಥಿಗಳು ಬೆಳಿಗ್ಗೆ ಶಾಲಾ- ಕಾಲೇಜುಗಳಿಗೆ ಹೋಗಲು ಬಸ್ ನಿಲುಗಡೆ ಮಾಡುವುದಿಲ್ಲ. ಇದರಿಂದ ತೊಂದರೆಯಾಗಿದೆ. ಗ್ರಾಮಕ್ಕೆ ಎಲ್ಲಾ ಬಸ್ಸುಗಳು ನಿಲುಗಡೆಯಾಗಬೇಕು ಎಂದು ಪ್ರೊ.ಬಸವರಾಜ ಪಾಟೀಲ ಒತ್ತಾಯಿಸಿದ್ದಾರೆ.

ಕೋರಹಳ್ಳಿ ಗ್ರಾಮದ ರಸ್ತೆಯಲ್ಲಿ ಮಲೀನ ನೀರು ಹರಿಯುತ್ತಿರುವುದು
ಗ್ರಾಮದ ಪ್ರತಿ ಮನೆಯವರೂ ಬಳಸಿದ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಇದರಿಂದ ರೋಗರುಜಿನುಗಳು ಹೆಚ್ಚುತ್ತಿವೆ ವ್ಯವಸ್ಥಿತ ಚರಂಡಿ ನಿರ್ಮಿಸಬೇಕು.
-ಡಾ. ಬಿ.ಎನ್.ಪಾಟೀಲ ವೈದ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.