ವಿಜಯಪುರ: ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಈರುಳ್ಳಿ ಬೆಳೆವಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
ಹಿಂಗಾರು ಹಂಗಾಮಿನ ಈರುಳ್ಳಿ ಬೆಳೆವಿಮೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ನ.30 ಹಾಗೂ ಬೇಸಿಗೆ ಹಂಗಾಮಿನ ಈರುಳ್ಳಿ ಬೆಳೆಯ ನೋಂದಾಯಿಸಿಕೊಳ್ಳಲು 2025ರ ಜನವರಿ 1ರಿಂದ ಫೆ.28 ರವರೆಗೆ ಬೆಳೆವಿಮೆ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಬ್ಯಾಂಕ್ ಶಾಖೆಯನ್ನು ಹಾಗೂ ಮೊ– 7795927064ಕ್ಕೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬಡವರಿಗೆ ಯೋಜನೆ ತಲುಪಿಸಿ’
ತಾಳಿಕೋಟೆ: ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದ ಏಳಿಗೆಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಈ ಯೋಜನೆ ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಆಸಕ್ತಿ ಅಗತ್ಯವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು. ಅವರು ಪಟ್ಟಣದ ಎಚ್.ಎಸ್.ಪಾಟೀಲ ಸಭಾ ಭವನದಲ್ಲಿ ಭಗವಾನ್ ಬಿರ್ಸಾಮುಂಡ ಅವರ 150ನೇ ಜಯಂತಿ ವರ್ಷದ ಅಂಗವಾಗಿ ತಾ.ಪಂ. ವತಿಯಿಂದ ಹಮ್ಮಿಕೊಂಡ ಜನ ಜಾತೀಯ ದಿವಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕಿನ 18 ಗ್ರಾಮಗಳಿಗೆ ಅನ್ವಯಿಸುವ ಈ ಯೋಜನೆಯಲ್ಲಿ 12 ಗ್ರಾಮಗಳು ನನ್ನ ಮತಕ್ಷೇತ್ರಕ್ಕೆ ಬರುತ್ತವೆ. ಆದರೆ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ವ್ಯವಸ್ಥಿತವಾಗಿ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಧಿಕಾರಿಗಳು ಕೇವಲ ಸರ್ಕಾರದ ಆದೇಶ ಪಾಲಿಸುವವರಾಗಬಾರದು ಅದರ ಯಶಸ್ವಿಗಾಗಿ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು. ತಾ.ಪಂ. ಇಒ ನಿಂಗಪ್ಪ ಮಸಳಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಿ.ಜಿ. ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧಿಕಾರಿಗಳಾದ ಜೆ.ಆರ್.ಜೈನಾಪೂರ ಡಾ.ಸತೀಶ ತಿವಾರಿ ಸುರೇಶ ಬಾವಿಕಟ್ಟಿ ರಾಠೋಡ ಎಸ್.ಎಂ.ಪಾಲ್ಕಿ ಶಿವಲಿಂಗ ಹಡಚದ ಹಿರೇಗೌಡರ ಸಚಿನ್ ಪಾಟೀಲ ಮಡು ಸಾಹುಕಾರ ವಾಲ್ಮೀಕಿ ಸಮಾಜದ ಮುಖಂಡರಾದ ಲಕ್ಷ್ಮಣ ಕೊಡೆಕಲ್ ಕುಮಾರ ಅಸ್ಕಿ ಕಾಶಿನಾಥ ಪಾಟೀಲ. ಬಿ.ಐ.ಹಿರೆಹೋಳಿ ನಿರೂಪಿಸಿದರು. ಎನ್.ವಿ.ಕೋರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.