ವಿಜಯಪುರ: ‘ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು’ ಎಂದು ವೈದ್ಯ ಡಾ.ಆರ್.ಸಿ.ಬಿದರಿ ಹೇಳಿದರು.
ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ತಾವು ಇರಿಸಿದ ₹5ಲಕ್ಷ ಠೇವಣಿಯ ಬಡ್ಡಿಯ ಮೊತ್ತದಿಂದ ಪ್ರಸಕ್ತ ವರ್ಷ 550 ವಿದ್ಯಾರ್ಥಿಗಳಿಗೆ 2,500 ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
‘ಶಿಕ್ಷಣ ಎಲ್ಲರ ಹಕ್ಕು. ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ ಕಲಿಕೆಯ ಕ್ರಮಗಳು ಬದಲಾಗುತ್ತಿವೆ. ಇತ್ತೀಚಿನ ತಂತ್ರಜ್ಞಾನದಿಂದಾಗಿ ಮಕ್ಕಳು ಬರವಣಿಗೆಯನ್ನು ನಿಲ್ಲಿಸುವಂತಾಗಿದೆ. ನಾವು ಬರೆಯುವ ಅಕ್ಷರಗಳು ಮತ್ತು ನಮ್ಮ ಬರವಣಿಗೆ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಆದ್ದರಿಂದ ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಗಣಿತ ವಿಷಯ ಪರಿವೀಕ್ಷಕ ಎಂ.ಎಸ್.ಬ್ಯಾಹಟ್ಟಿ ಅವರು, ಸರ್ ಸಿ.ವಿ.ರಾಮನ್ ಅವರ ಸಾಧನೆ, ಬರವಣಿಗೆ ಮಹತ್ವ ವಿವರಿಸಿದರು. ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡಿದರು. ಅಧ್ಯಕ್ಷ ಎಚ್.ಆರ್.ಬಿರಾದಾರ, ಉಪಾಧ್ಯಕ್ಷ ಎಚ್.ಆರ್.ಮಾಚಪ್ಪನವರ, ಡಾ.ಎಚ್.ವಿ.ಕರಿಗೌಡರ, ನಿರ್ದೇಶಕ ಡಾ.ಕಂಠೀರವ್ ಆರ್.ಕುಳ್ಳೊಳ್ಳಿ, ಖಜಾಂಚಿ ಸುರೇಶ ಹಿರೇದೇಸಾಯಿ ಇದ್ದರು. ಎಸ್.ಎಸ್.ಪಾಟೀಲ ಸ್ವಾಗತಿಸಿದರು. ಜಿ.ಎಂ.ಬಿರಾದಾರ ನಿರೂಪಿಸಿ, ಡಾ.ಎಚ್.ವಿ.ಕರಿಗೌಡರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.