ಆಲಮಟ್ಟಿ (ವಿಜಯಪುರ ಜಿಲ್ಲೆ): ಆಲಮಟ್ಟಿ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯದ ಮೂರನೇ ಒಂದು ಭಾಗದಷ್ಟು ನೀರು ಮೇ ತಿಂಗಳಲ್ಲಿಯೇ ಭರ್ತಿಯಾಗಿದೆ. ಹೀಗೆ ಭರ್ತಿಯಾಗಿರುವುದು ಜಲಾಶಯದ ಇತಿಹಾಸದಲ್ಲಿಯೇ ಇದೇ ಪ್ರಥಮ ಎನ್ನಲಾಗಿದೆ.
ಒಟ್ಟು 123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ 41.036 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸೋಮವಾರ ಒಂದೇ ದಿನ 42,973 ಕ್ಯುಸೆಕ್ (3.71 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
519.60 ಮೀಟರ್ ಎತ್ತರದ ಜಲಾಶಯದಲ್ಲಿ 512.02 ಮೀ.ವರೆಗೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ (ಮೇ 23) 508.60 ಮೀ.ವರೆಗೆ ನೀರು ಸಂಗ್ರಹವಿತ್ತು. ಸದ್ಯ, ಹೊರಹರಿವಿನ ಪ್ರಮಾಣ 624 ಕ್ಯುಸೆಕ್ ಆಗಿದೆ.
ಕಡಿಮೆಯಾದ ಒಳಹರಿವು: ಜಲಾಶ ಯದ ಹಿಂಭಾಗದ ಹಿಪ್ಪರಗಿ ಜಲಾಶಯಕ್ಕೆ ಒಳಹರಿವು ಇಳಿದಿದ್ದು, 5,000 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ನಿಂತಿದ್ದು, ಒಳಹರಿವು ಕ್ರಮೇಣ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.