ಹೊರ್ತಿ: ಸಮಿಪದ ನಂದರಗಿ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಗಮಾಬಾಯಿ ಚಂದ್ರಕಾಂತ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಂಗನಗೌಡ ಮರನಿಂಗಪ್ಪಗೌಡ.ಪಾಟೀಲ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಆರ್.ಜಿ. ಹಳ್ಳಿ ತಿಳಿಸಿದರು.
ಒಟ್ಟು 13 ಸದಸ್ಯರು , ನಂದರಗಿ, ಶಿಗಣಾಪುರ, ಧುಮಕನಾಳ ಈ ಮೂರು ಗ್ರಾಮದ ಸದಸ್ಯರು ಕೂಡಿ ಸರ್ವಾನುಮತದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದರು.
ಗ್ರಾ.ಪಂ ಪಿಡಿಒ ಸುರೇಶ ಕುಂಬಾರ, ಸಂತೋಷಗೌಡ ಪಾಟೀಲ, ಶೇಖುಗೌಡ ಪಾಟೀಲ, ಗುಂಡುಗೌಡ ಪಾಟೀಲ ಹಾಗೂ ನಂದರಗಿ, ಶಿಗಣಾಪುರ, ಧುಮಕನಾಳ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.