ತಾಳಿಕೋಟೆ: ನ್ಯಾಯಾಲಯದ ತಡೆಯಾಜ್ಞೆ ಮೀರಿ ಬಸ್ ನಿಲ್ದಾಣದ ಮುಂದಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿರುವ ಪುರಸಭೆಯ ಕ್ರಮವನ್ನು ವಿರೋಧಿಸಿ ಬಸ್ ನಿಲ್ದಾಣದ ಮುಂದಿರುವ ಡಬ್ಬಾ ಅಂಗಡಿಗಳ ಕುಟುಂಬದವರು ಆರಂಭಿಸಿರುವ ಅಹೋರಾತ್ರಿ ಧರಣಿಯು ಶುಕ್ರವಾರ ಮೂರನೆಯ ದಿನಕ್ಕೆ ಕಾಲಿಟ್ಟಿದೆ.
ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮತ್ತು ಹಲವು ಪ್ರಮುಖರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಸಂಜೆಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಎ.ಸಿ. ಗುರುನಾಥ ಧಡ್ಡೆ, ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ, ತಹಶೀಲ್ದಾರ್ ಕೀರ್ತಿ ಚಾಲಕ ಅವರು ಧರಣಿ ನಿರತರ ಜೊತೆ ಮಾತನಾಡಿದರು. ಅವರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಧರಣಿ ಕೈ ಬಿಡುವಂತೆ ಮನ ಒಲಿಸುವ ಪ್ರಯತ್ನ ನಡೆಸಿದರು. ಆದರೆ ಹೋರಾಟಗಾರರು ನ್ಯಾಯ ಸಿಗುವವರೆಗೆ ನಿರಶನದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.