ADVERTISEMENT

ಆಲಮಟ್ಟಿ: ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:47 IST
Last Updated 22 ಜೂನ್ 2024, 15:47 IST
ಆಲಮಟ್ಟಿಯ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಗುತ್ತಿಗೆದಾರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು
ಆಲಮಟ್ಟಿಯ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಗುತ್ತಿಗೆದಾರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು   

ಆಲಮಟ್ಟಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘ ಕಳೆದ ಮೂರು ದಿನಗಳಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಆರಂಭಿಸಿದ್ದ ಧರಣಿ ಸತ್ಯಾಗ್ರಹ ಶನಿವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವಾಗಿ ಪರಿವರ್ತನೆಗೊಂಡಿತು.

ಕೆಬಿಜೆಎನ್ಎಲ್ ನಲ್ಲಿ ಕಳೆದ ವರ್ಷ ಕರೆದಿದ್ದ ಕಾಮಗಾರಿಗಳ ಟೆಂಡರ್ ತೆರೆದು ಕಾಮಗಾರಿ ಆದೇಶ ನೀಡಿಲ್ಲ, ಆಗ ಟೆಂಡರ್ ಜತೆ ನೀಡಿದ್ದ ಇಎಂಡಿ ಹಣವನ್ನು ಪಾವತಿಸಿಲ್ಲ, ಹೀಗಾಗಿ ನೂರಾರು ಗುತ್ತಿಗೆದಾರರ ಕೋಟ್ಯಂತರ ಹಣ ಇಎಂಡಿ ರೂಪದಲ್ಲಿ ನಿಗಮದಲ್ಲಿದೆ. ಇಎಂಡಿ ಹಣ ಮರಳಿಸಬೇಕು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.

ಮೊದಲು ಧರಣಿ ಸತ್ಯಾಗ್ರಹ ನಡೆಸಿದ್ದೇವೆ. ಈಗ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ಇದಕ್ಕೂ ಕೆಬಿಜೆಎನ್ಎಲ್ ಅಧಿಕಾರಿಗಳು ಸ್ಪಂದಿಸದಿದ್ದರೇ ಜೂನ್ 25 ರಂದು ಮುಖ್ಯ ಎಂಜಿನಿಯರ್ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಎ. ಮೇಟಿ ಹೇಳಿದರು.

ADVERTISEMENT

ಮಹಾಂತೇಶ ಬೆಳಗಲ್ಲ, ಎಂ.ಆರ್. ಕಮತಗಿ, ಬಸವರಾಜ ದಂಡಿನ, ಚಂದ್ರಶೇಖರ ಪಳನಿ, ಮಂಜುನಾಥ, ಸತೀಶ ಪಾಟೀಲ, ರಾಘು ಪತ್ತಾರ, ಯಾಕೂಬ್ ಮುದ್ನಾಳ, ಚನ್ನಬಸು ಅಂಗಡಿ, ಸಲೀಂ ಮೇಲಿನಮನಿ, ಸುನಿಲಗೌಡ ಪಾಟೀಲ, ಸಂತೋಷ ಮರಡಿ, ಎಂ.ಡಿ. ಯುಸೂಫ್, ಬಿ.ಪಿ. ರಾಠೋಡ, ಎಚ್.ಜಿ. ಯಂಡಿಗೇರಿ, ಟಿ.ಎಸ್. ಅಫಜಲಪುರ, ಮಹಾಂತೇಶ ಡೆಂಗಿ, ಮಹಾಂತೇಶ ಬಿಜಾಪುರ ಇದ್ದರು.

ಆಲಮಟ್ಟಿಯ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.