ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿವಿಜಯಪುರ ಜಿಲ್ಲೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ(ಎನ್‌ಟಿಪಿಸಿ) ದುಡಿಯುತ್ತಿರುವ ಹೊರರಾಜ್ಯದ ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಕಳುಹಿಸುವಂತೆ ಪ್ರತಿಭಟನೆಗಿಳಿದರು. ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲಾಯಿತು.
ಉದ್ಯೋಗ ಆರಿಸಿ ಹೊರರಾಜ್ಯಗಳಿಗೆ ಗುಳೆ ಹೋಗಿದ್ದ ಠಾಣಾ ವ್ಯಾಪ್ತಿಯ ಹಳ್ಳಿಗಳ ಹಾಗೂ ತಾಂಡಾಗಳ ಸಾವಿರಾರು ಜನರನ್ನು ಲಾಕ್‌ಡೌನ್ ಅವಧಿಯಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಅವಧಿಯನ್ನು ಮುಗಿಸಿ ಗ್ರಾಮಗಳಿಗೆ ಕಳುಹಿಸುವ ಕೆಲಸ ಮಾಡಿದೆ.
ಲಾಕ್‌ಡೌನ್ ವೇಳೆ ಐದು ತಿಂಗಳು ಕುಟುಂಬದಿಂದ ದೂರವಿದ್ದೆ. ಸಮರ್ಥವಾಗಿ ಕರ್ತವ್ಯ ನಿಭಾಯಿಸಲು ಪತಿ, ಸಹಕಾರಿ ಇಲಾಖೆಯ ನಿರೀಕ್ಷಕ ಗೋವಿಂದಗೌಡ ಪಾಟೀಲ್ ಬೆಂಬಲವಾಗಿದ್ದಾರೆ.
ಜಮಖಂಡಿ ತಾಲ್ಲೂಕಿನ ಕುಂಚನೂರು ಗ್ರಾಮದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು, ಕಬಡ್ಡಿಪಟುವೂ ಹೌದು. ಕರ್ನಾಟಕ ವಿವಿಗೆ ನಾಲ್ಕು ಬಾರಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿಗೆ ಒಂದು ಬಾರಿ ಯೂನಿರ್ವಸಿಟಿ ಬ್ಲೂ ಆಗಿದ್ದೆ.
–ರೇಣುಕಾ ಜಕನೂರು,ಪಿಎಸ್ಐ,ಎನ್‌ಟಿಪಿಸಿ ಪೊಲೀಸ್ ಠಾಣೆ,ಕೂಡಗಿ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.