ಕೊರೊನಾ ಸಂಕಷ್ಟದ ಸಮಯದಲ್ಲಿ ನಾವು ಐದು ವರ್ಷದ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಒಂದೂವರೆ ತಿಂಗಳು ಕೆಲಸ ಮಾಡಿದೆವು.
ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕೊವಿಡ್ ಸೊಂಕಿತರನ್ನು ಚಿಕಿತ್ಸೆಗೆ ಸಾಗಿಸಲು ನಮ್ಮ ಆಂಬುಲೆನ್ಸ್ ಆಯ್ಕೆ ಮಾಡಲಾಯಿತು. ಆಲ್ ಅಮಿನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ನಿ ಕೂಡ ಕೊರೊನಾ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸಬೇಕಾಯಿತು.
ನಮ್ಮ ಐದು ವರ್ಷದ ಪುತ್ರಿ ಹನಿಷ್ಕಾಳನ್ನು ತಿಕೋಟಾದ ತಮ್ಮ ಪಕ್ಕದ ಮನೆಯ ಸಣ್ಣಜ್ಜಿ ಮನೆಯಲ್ಲಿ ಬಿಡುತ್ತಿದ್ದೆವು. ಮಗಳು ದಿನಾಲು ವಿಡಿಯೊ ಕಾಲ್ ಮಾಡಿ ‘ಬೇಗ ಬನ್ನಿ ಪಪ್ಪಾ, ಮಮ್ಮಿ’ ಅಂತಾ ಕಣ್ಣೀರಿಡುತ್ತಿದ್ದಳು...ಈಗಲೂ ನೆನಪಿಸಿಕೊಂಡರೆ ಕಣ್ಣೀರಾಗುತ್ತೇವೆ.
ತಿಕೋಟಾ ಭಾಗದ ಯಾವುದಾದರೂ ಕೋವಿಡ್ ಸೋಂಕಿತರನ್ನು ತರಲು ವಿಜಯಪುರದಿಂದ ಬಂದಾಗ ಪಕ್ಕದ ಮನೆಯವರಿಗೆ ಕರೆ ಮಾಡಿ ಮಗಳನ್ನು ಕರೆದುಕೊಂಡು ರಸ್ತೆಯ ಬದಿಯಲ್ಲಿ ನಿಲ್ಲಲು ಹೇಳುತ್ತಿದ್ದೆವು. ಪಿಪಿಇ ಕಿಟ್ ಧರಿಸಿರುತ್ತಿದ್ದರಿಂದ ಮಗಳಿಗೆ ಆಂಬುಲೆನ್ಸ್‌ಲ್ಲಿರುತ್ತಿದ್ದ ನಮ್ಮನ್ನು ಗುರುತಿಸುವುದು ಸಾಧ್ಯವಾಗುತ್ತಿರಲಿಲ್ಲ.
–ರಮೇಶ, ಸರಸ್ವತಿ ದಂಪತಿ, ತಿಕೋಟಾ, ವಿಜಯಪುರ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.