ವಿಜಯಪುರ: ಜಿಲ್ಲೆಯ ಹಲವೆಡೆ ಬುಧವಾರ ಮಧ್ಯಾಹ್ನದ ವೇಳೆ ಆಗಸದಲ್ಲಿ ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ ಸೃಷ್ಟಿಯಾದ ಖಗೋಳ ವಿಸ್ಮಯ ಜನರ ಮನಸೂರೆಗೊಂಡಿತು.
ತಾಳಿಕೋಟೆ, ನಾಲತವಾಡ, ಕಲಕೇರಿ, ಆಲಮಟ್ಟಿ, ನಿಡಗುಂದಿ ವ್ಯಾಪ್ತಿಯಲ್ಲಿ ಕಂಡುಬಂದ ಪ್ರಕೃತಿಯ ಈ ವಿಸ್ಮಯವನ್ನು ಜನರು ಕಣ್ತುಂಬಿಕೊಂಡರು. ಮೋಡದ ಮರೆಯಲ್ಲಿ ಬಹಳ ಹೊತ್ತು ಕಂಡುಬಂದ ಈ ಖಗೋಳ ಕೌತಕವನ್ನು ಅನೇಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು.
ಸೂರ್ಯನ ಸುತ್ತ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜಿನ ಕಣಗಳ ಮೇಲೆ ಬೆಳಕು ತೂರಿಕೊಂಡು ಭೂಮಿಯತ್ತ ಬರುವಾಗ ಈ ಆಕರ್ಷಕ ವೃತ್ತ ಗೋಚರಿಸುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ.
ವಾರದ ಹಿಂದೆ ಬೆಂಗಳೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ವಿಸ್ಮಯ ಇದೀಗ ವಿಜಯಪುರ, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.