ADVERTISEMENT

ತಾಳಿಕೋಟೆ: ಗ್ರಂಥಾಲಯಕ್ಕೆ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:08 IST
Last Updated 12 ಆಗಸ್ಟ್ 2024, 15:08 IST
ತಾಳಿಕೋಟೆಯ ಗ್ರಂಥಾಲಯಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಭೇಟಿ ನೀಡಿ, ಪರಿಶೀಲಿಸಿದರು
ತಾಳಿಕೋಟೆಯ ಗ್ರಂಥಾಲಯಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಭೇಟಿ ನೀಡಿ, ಪರಿಶೀಲಿಸಿದರು   

ತಾಳಿಕೋಟೆ: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಪಟ್ಟಣದ ಕನ್ನಡ ಮಾದರಿ ಶಾಲಾ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಸೋಮವಾರ ಭೇಟಿ ನೀಡಿದರು.

ಗ್ರಂಥಾಲಯದ ಕಟ್ಟಡ, ಅಲ್ಲಿರುವ ಮೂಲ ಸೌಲಭ್ಯಗಳು, ಓದುಗರ ಸಂಖ್ಯೆ ಕುರಿತು ಗ್ರಂಥಪಾಲಕ ಕೃಷ್ಣಾಜಿ ಕುಲಕರ್ಣಿ ಅವರಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ಇರುವ ಕಟ್ಟಡವನ್ನು ವಿಸ್ತರಿಸಿ ನಿರ್ಮಿಸಿ ಅಲ್ಲಿ ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಓದಲು ಸುಸಜ್ಜಿತವಾದ ಕೊಠಡಿ, ಕಂಪ್ಯೂಟರ್‌ಗಳನ್ನು ಅಳವಡಿಸುವ ಕಾರ್ಯವನ್ನು ಫೌಂಡೇಷನ್ ಮೂಲಕ ಮಾಡಿಕೊಡಲಾಗುವುದು ಎಂದರು.

ಈಗಾಗಲೇ ರಾಜ್ಯದಲ್ಲಿ ಸುಮಾರು 70,000 ಸಾರ್ವಜನಿಕ ಗ್ರಂಥಾಲಯಗಳನ್ನು ಫೌಂಡೇಷನ್ ಮೂಲಕ ನಿರ್ಮಿಸಿ ಕೊಡಲಾಗಿದೆ. ಆಗಸ್ಟ್ 12 ಅಂತರರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಆಗಿರುವುದರಿಂದ ಈ ದಿನದಂದು ವಿಜಯಪುರ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಪ್ರವಾಸ ನಡೆಸಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಿತಿಗತಿಗಳನ್ನು ಫೌಂಡೇಷನ್‌ ಮೂಲಕ ತಿಳಿದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ADVERTISEMENT

ತಹಶೀಲ್ದಾರ್‌ ಕೀರ್ತಿ ಚಾಲಕ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾದವ್, ಶಿರಸ್ತೆದಾರ ಜೆ.ಆರ್.ಜೈನಾಪೂರ, ಸಿಆರ್ ಪಿ ರಾಜು ವಿಜಾಪೂರ, ಲೆಕ್ಕಾಧಿಕಾರಿ ಸಿದ್ದಲಿಂಗ ಪಾಟೀಲ, ಎಂ.ಎಂ. ಅತ್ತಾರ ಇದ್ದರು.

ಅಮೂಲ್ಯ ಗ್ರಂಥಗಳನ್ನು ಹೊಂದಿರುವ ಗ್ರಂಥಾಲಯದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ನರಳಿತ್ತು. ಓದುಗರು, ಪಟ್ಟಣದ ಸಂಘ- ಸಂಸ್ಥೆಗಳವರು ಗ್ರಂಥಾಲಯ ವಿಸ್ತರಣೆ, ಅಭಿವೃದ್ಧಿಗೆ ಕೋರಿ ಶಾಸಕರು, ಪುರಸಭೆಗೆ ಹಲವು ಮನವಿ ಸಲ್ಲಿಸಿದ್ದರು. ಗುಂಡುರಾವ್ ಧನಪಾಲ, ಆನಂದ ತಳವಾರ, ಅಶೋಕ ಹಂಚಲಿ, ಸಿದ್ಧಾರ್ಥ ಕಟ್ಟಿಮನಿ ಇದ್ದರು.

ಗ್ರಂಥಾಲಯಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.