ADVERTISEMENT

ಇಂಚಗೇರಿ ಸ್ವಾತಂತ್ರ್ಯ ಹೋರಾಟಗಾರರ ತವರೂರು: ಶಂಕ್ರೆಪ್ಪ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:12 IST
Last Updated 15 ಜೂನ್ 2024, 15:12 IST
ಹೊರ್ತಿ ಸಮೀಪದ ಇಂಚಗೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಯೋಧ ಮಲ್ಲಪ್ಪ ಅರವತ್ತಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಂತ ನಾಮದೇವ ಮಹಾರಾಜರು ಮಾತನಾಡಿದರು
ಹೊರ್ತಿ ಸಮೀಪದ ಇಂಚಗೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಯೋಧ ಮಲ್ಲಪ್ಪ ಅರವತ್ತಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಂತ ನಾಮದೇವ ಮಹಾರಾಜರು ಮಾತನಾಡಿದರು   

ಹೊರ್ತಿ: ಇಂಚಗೇರಿ ಗ್ರಾಮವು ಸ್ವಾತಂತ್ರ್ಯ ಹೋರಾಟಗಾರರ ತವರೂರು ಎಂದು ಶಂಕ್ರೆಪ್ಪ ಮಹಾರಾಜರು ಹೇಳಿದರು.

ಸಮೀಪದ ಇಂಚಗೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯಯೋಧ ದಿ.ಮಲ್ಲಪ್ಪ ಅರವತ್ತಿ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ ಹೋರಾಟಗಾರ ಮಲ್ಲೇಶಪ್ಪ ಅರವತ್ತಿ ಅವರು, ಹುಬ್ಬಳ್ಳಿಯ ಸ್ವಾತಂತ್ರ್ಯಯೋಧ ಹಾಗೂ ಹೋರಾಟದ ಮುಂಚೂಣಿ ನಾಯಕ ಮುರಗೋಡ ಮಹಾದೇವಪ್ಪನವ(ಮಾಧವಾನಂದ ಪ್ರಭುಜಿಯವ)ರ ಒಡನಾಡಿಯಾಗಿ ಅವರ ಪ್ರೇರಣೆಗೊಳಪಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದವರು. ಅಧ್ಯಾತ್ಮ ಜೀವಿಯಾಗಿದ್ದರು ಎಂದರು

ADVERTISEMENT

ನಾಮದೇವ ಮಹಾರಾಜರು ಮತನಾಡಿ, ಪ್ರಪಂಚದೊಂದಿಗೆ ಪಾರಮಾರ್ಥ ಮಾರ್ಗ ಮತ್ತು ಸ್ವಾತಂತ್ರ ಅನುಸರಿಸಿ ಮಹಾದೇವರ ಆಜ್ಞಾನುಸಾರ ಸ್ವಾತಂತ್ರಯ ಹೋರಾಟದಲ್ಲಿ ಪಾಲ್ಗೊಂಡು ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರ ಸೇವೆ ಸ್ಮರಣೀಯ  ಎಂದು ಹೇಳಿದರು.

ಖೋಜಾನವಾಡಿಯ ಗೀರಿಶ ಸಂತಿ ಮಹಾರಾಜರು ದಾಸಬೋಧದ ವಿಮಲಬ್ರಹ್ಮ, ಕೇಂಚಪ್ಪ ಮಹಾರಾಜರು ಮಮದಾಪೂರ, ಭೀಮಣ್ಣ ಮಹಾರಾಜರು ಹೊಸಟ್ಟಿ, ಮಹೇಶ ಅರಳಿ, ಮಹಾದೇವ ಮುರಗೋಡ, ಸುಭಾಷ ವರೂರ, ಇಂಚಗೇರಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಣ್ಣ ಸಕ್ರಿ, ಉಪಾಧ್ಯಕ್ಷ ಮತ್ತು ಗ್ರಾ.ಪಂ ಮಾಜಿ ‌ಅಧ್ಯಕ್ಷ ಕಲಪ್ಪ ಮ.ಅರವತ್ತಿ, ಸದಸ್ಯ ಸುಭಾಷ ಓಂಕಾರಶೆಟ್ಟಿ, ಸಂಗಪ್ಪ ಮ.ಅರವತ್ತಿ, ಶಂಕರ ಸಾತಲಗಾಂವ, ಮಹಾದೇವ ಮ.ಅರವತ್ತಿ, ಸಿದ್ಧಣ್ಣ ಕುಂಬಾರ, ಮಲಕಪ್ಪ ಮ.ಅರವತ್ತಿ, ರಮೇಶ ದಿಕ್ಷೀತ, ರಾಕೇಶ ಅರವತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.