ADVERTISEMENT

ಒಂದು ಸಾವಿರ ಎಕರೆಯಲ್ಲಿ ಅರಣ್ಯ ಬೆಳಸಲು ಮನವಿ: ಸಿಎಂ ಸಿದ್ದರಾಮಯ್ಯ

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳಿಗೆ ಪ್ರಥಮ ಗುರುನಮನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 15:57 IST
Last Updated 2 ಜನವರಿ 2024, 15:57 IST
<div class="paragraphs"><p>ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ನಡೆದ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ</p></div>

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ನಡೆದ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಇತರರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

   

ವಿಜಯಪುರ: ‘ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಸ್ಮರಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸಲು ಸಚಿವರು, ಮಠಾಧೀಶರು ಕೋರಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಮಂಗಳವಾರ ನಡೆದ ಸಿದ್ಧೇಶ್ವರ ಶ್ರೀಗಳ ಪ್ರಥಮ ವರ್ಷದ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬಸವಾದಿ ಶರಣರು ಜಾತಿ, ವರ್ಗ, ಧರ್ಮ ರಹಿತ ಸಮ ಸಮಾಜದ ಕನಸು ಕಂಡಿದ್ದರು.‌ ನಮ್ಮ ಸಂವಿಧಾನವೂ ಇದನ್ನೇ ಹೇಳುತ್ತದೆ. ಸಿದ್ದೇಶ್ವರ ಶ್ರೀಗಳ ಆಶಯವೂ ಅದೇ ಆಗಿತ್ತು ಎಂಬುದು ಅವರ ಅಂತಿಮ ಅಭಿವಂದನಾ ಪತ್ರದಲ್ಲಿ (ವಿಲ್) ದಾಖಲಾಗಿದೆ’ ಎಂದರು.

ADVERTISEMENT

‘ದಾರ್ಶನಿಕರಾಗಿದ್ದ ಸಿದ್ಧೇಶ್ವರ ಶ್ರೀಗಳು ಮನುಷ್ಯ ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ತಮ್ಮ ಪ್ರವಚನಗಳಲ್ಲಿ ತಿಳಿಸಿದರು.‌  ಸಂತರಲ್ಲಿ ಇವರಷ್ಟು ಸರಳ ವ್ಯಕ್ತಿತ್ವ ನಾನು ಇನ್ನೊಬ್ಬರನ್ನು ನೋಡಿಲ್ಲ. ಅವರಲ್ಲಿ ಯಾವುದೇ ಆಡಂಬರ ಇರಲಿಲ್ಲ, ಆಹಂ ಇರಲಿಲ್ಲ’ ಎಂದರು.

ಶ್ರೀಗಳ ಪ್ರವಚನದ ಸಾರವನ್ನು ಒಳಗೊಂಡಂತೆ ಹೊರತರಲಾದ 20 ಪುಸ್ತಕಗಳನ್ನು ಸಿದ್ದರಾಮಯ್ಯ ಅವರು  ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ ಗುರುನಮನ ಸಂದೇಶವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಚಿಸಿದರು.

ಬಾಬಾ ರಾಮದೇವ್ ಅವರು ಹರಿದ್ವಾರದಿಂದ ಗುರುನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದು, ನೇರ ಪ್ರಸಾರ ಮಾಡಲಾಯಿತು.

‌ಗುರುನಮನದ ನಿಮಿತ್ತ ಜಿಲ್ಲೆ ಸೇರಿ ರಾಜ್ಯ, ಹೊರರಾಜ್ಯದಿಂದ ಅಪಾರ ಭಕ್ತರು, ಮಠಾಧೀಶರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.