ADVERTISEMENT

‘10 ತಿಂಗಳಲ್ಲಿ ₹18 ಕೋಟಿ ಸೈಬರ್‌ ವಂಚನೆ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:39 IST
Last Updated 10 ನವೆಂಬರ್ 2024, 16:39 IST

ಸೋಲಾಪುರ: ಕಳೆದ 10 ತಿಂಗಳಲ್ಲಿ ಸೋಲಾಪುರದಲ್ಲಿ ಒಟ್ಟು 1,700 ವ್ಯಕ್ತಿಗಳು ಆನ್‌ಲೈನ್‌ ಮೂಲಕ ಸುಮಾರು ₹18 ಕೋಟಿ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ ಎಂದು ನಗರದ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಶ್ರೀಶೈಲ ಗಜಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಕಲಿ ಎಸ್ಎಂಎಸ್‌ಗಳಿಗೆ ಪ್ರತಿಕ್ರಿಯೆ, ಓಟಿಪಿ ಶೇರ್, ದುಪ್ಪಟ್ಟು ಹಣದ ಆಮಿಷ ನೀಡಿ ವಂಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿ, ನಕಲಿ ಎಸ್ಎಂಎಸ್ ಕಳುಹಿಸಲಾಗುತ್ತದೆ. ನಂತರ ಪೋನ್‌ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣ ಜಮೆಯಾಗಿದೆ, ಅದನ್ನು ವಾಪಸ್ ಕಳುಹಿಸಿ ಎಂದು ಹಣ ಕಬಳಿಸಲಾಗುತ್ತಿದೆ. ಸೈಬರ್ ವಂಚಕರು ಹೊಸ ಪ್ರಕಾರದ ವಂಚನೆ ಶುರು ಮಾಡಿದ್ದು, ಸಾಮಾನ್ಯರು ಇಂತಹ ಸಮಯದಲ್ಲಿ ತಕ್ಷಣ ಸೈಬರ್‌ ಠಾಣೆಗೆ ಸಂಪರ್ಕಿಸಬೇಕು. ಸೈಬರ್‌ ಠಾಣೆಯಿಂದ ₹2.7 ಕೋಟಿ ವಂಚನೆಗೊಳಗಾದವರಿಗೆ ಬ್ಯಾಂಕಿನ ಸಹಕಾರದಿಂದ ಹಣ ವಾಪಸ್ ನೀಡಲಾಗಿದೆ. 

ADVERTISEMENT

ಕ್ರೆಡಿಟ್ ಕಾರ್ಡ್ ಪಡೆಯುವಂತೆ, ಕೆವೈಸಿ ಮೊಬೈಲ್ ನಂಬರ್ ಅಪ್ಡೇಟ್, ಓಟಿಪಿ, ಲಾಟರಿ ಹತ್ತಿದೆ ಜಿಎಸ್‌ಟಿಯ ಹಣವನ್ನು ಮೊದಲು ನಂತರ ನಿಮಗೆ ಉಳಿದ ಹಣ ಜಮಾ ಮಾಡಲಾಗುವುದು, ನಿಮ್ಮ ಮಗನ ಮೇಲೆ ಪೊಲೀಸ್ ಕೇಸ್ ಆಗಿದೆ ಆತನನ್ನು ಬಿಡಿಸಲು ಹಣ ಕಳುಹಿಸಿ ಹೀಗೆ ಸೈಬರ್‌ ವಂಚಕರು ವಿವಿಧ ವಾಮ ಮಾರ್ಗಗಳನ್ನು ಬಳಸಿ ವಂಚಿಸುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.