ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕನ ಮೇಲೆ ಕ್ರಮ ಕೈಗೊಂಡು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಘಟಕದ ಜಿಲ್ಲಾ ಅಧ್ಯಕ್ಷೆ ವೀಣಾ ಕುಂದನಗಾರ, ‘ಕಿರುಕುಳ ಕುರಿತು ದೂರು ನೀಡಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆರೋಪಿಸಿದರು.
‘ಕುಲಪತಿಗಳು ಆಂತರಿಕ ತನಿಖಾ ವಿಭಾಗಕ್ಕೆ ಹಸ್ತಾಂತರಿಸಿ ಕೈ ತೊಳೆದುಕೊಳ್ಳದೆ, ನೊಂದ ವಿದ್ಯಾರ್ಥಿನಿಗೆ ಧೈರ್ಯ ತುಂಬುವ ಹಾಗೂ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
ಶಿವಗಂಗಾ ಕಟ್ಟಿಮನಿ, ಸಂಗಮೇಶಗೌಡ ದಾಶ್ಯಾಳ, ಕವಿತಾ ಅಳ್ಳೊಳ್ಳಿ, ಮಲ್ಲಮ್ಮ ಲಮಾಣಿ, ಸುವರ್ಣಾ ಹಳ್ಳಿ, ಅಶ್ವಿನಿ ಸಾವಂತ, ಬೇಬಿ ತಳವಾರ, ಸುಜಾತಾ ಕರಕಲ್, ಶಕುಂತಲಾ ಚವ್ಹಾಣ, ನೀಲಾಂಬಿಕಾ ಬಿರಾದಾರ, ಬಿಸ್ಮಿಲ್ಲಾ ಬಾಗವಾನ, ಸಾಗರ ಜಾಧವ, ರಾಜು ಮೋಹಿತೆ, ಅಣ್ಣಪ್ಪ ಕೋಳಿ, ರಾಜಶ್ರೀ ತಳವಾರ, ಪಿಂಟು ಗೊಬ್ಬೂರ, ಇಸ್ಮಾಯಿಲ್ ಬರಗುಡಿ, ಮುಖದಸ್ ಇನಾಮದಾರ, ಅಮೀನ ಚಟ್ಟರಕಿ, ರಾವುತ ಆಸಂಗಿಹಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.