ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ: 625ಕ್ಕೆ 625 ಅಂಕ ಪಡೆದ ಸುಪ್ರಿಯಾ

ಮರು ಮೌಲ್ಯಮಾಪನದಲ್ಲಿ ಆರು ಅಂಕ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:18 IST
Last Updated 25 ಮೇ 2019, 13:18 IST
ಸುಪ್ರಿಯಾ ಜೋಶಿ
ಸುಪ್ರಿಯಾ ಜೋಶಿ   

ವಿಜಯಪುರ:ಮರು ಮೌಲ್ಯಮಾಪನದಲ್ಲಿ ಆರು ಅಂಕ ಗಳಿಸುವ ಮೂಲಕ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ಸಾಧನೆಗೈದಿದ್ದಾಳೆ ನಗರದ ಹೊರ ವಲಯದಲ್ಲಿರುವ ಇಟ್ಟಂಗಿಹಾಳದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ ಜೋಶಿ.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಾಗ ಸುಪ್ರಿಯಾ ಗಣಿತ, ಇಂಗ್ಲಿಷ್ (ತಲಾ 97) ಹೊರತುಪಡಿಸಿ ಉಳಿದ ಮೂರು ವಿಷಯಗಳಲ್ಲಿ 100ಕ್ಕೆ 100, ಮೊದಲ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಳು.

ಇನ್ನೂ ಹೆಚ್ಚಿನ ಅಂಕ ಬರಬೇಕು ಎಂಬ ಆತ್ಮವಿಶ್ವಾಸದಿಂದ ಸುಪ್ರಿಯಾ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಮರು ಮೌಲ್ಯಮಾಪನದಲ್ಲಿ ಎರಡೂ ವಿಷಯಗಳಲ್ಲಿ ತಲಾ 100 ಅಂಕ ಗಳಿಸುವ ಮೂಲಕ 625ಕ್ಕೆ 625 ಅಂಕ ಗಳಿಸಿದ ಸಾಧನೆಗೈದಿದ್ದಾಳೆ.

ADVERTISEMENT

‘ನಾಲ್ಕು ವಿಷಯಗಳಲ್ಲಿಯೂ ಔಟ್ ಆಫ್ ಔಟ್ ಬಂದಿದ್ದವು. ಈ ಎರಡೂ ವಿಷಯಗಳಲ್ಲಿಯೂ 100ಕ್ಕೆ 100 ಅಂಕ ಪಡೆಯುವ ನಿರೀಕ್ಷೆಯಿತ್ತು. ಶಿಕ್ಷಕರ ಸಲಹೆ ಪಡೆದು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೆ. ಇದೀಗ ನಾನೂ ಮೊದಲಿಗಳಾಗಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ಸುಪ್ರಿಯಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸುಪ್ರಿಯಾ ಓದಿದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಶನಿವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.