ADVERTISEMENT

ಆಲಮಟ್ಟಿ ಎಡದಂಡೆ ಕಾಲುವೆಗೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:14 IST
Last Updated 21 ಜುಲೈ 2024, 14:14 IST
ಆಲಮಟ್ಟಿ ಎಡದಂಡೆ ಮುಖ್ಯ ಸ್ಥಾವರದ ಮೂಲಕ ಭಾನುವಾರದಿಂದ ಕಾಲುವೆಗೆ ನೀರು ಹರಿಸಲಾಯಿತು
ಆಲಮಟ್ಟಿ ಎಡದಂಡೆ ಮುಖ್ಯ ಸ್ಥಾವರದ ಮೂಲಕ ಭಾನುವಾರದಿಂದ ಕಾಲುವೆಗೆ ನೀರು ಹರಿಸಲಾಯಿತು   

ಆಲಮಟ್ಟಿ: ದುರಸ್ತಿಯ ಕಾರಣ ನೀರು ಹರಿಯದೇ ಸ್ಥಗಿತವಾಗಿದ್ದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಭಾನುವಾರ ಬೆಳಿಗ್ಗೆಯಿಂದ ನೀರು ಹರಿಯಲು ಆರಂಭಿಸಲಾಗಿದೆ.

ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಜುಲೈ 17ರಿಂದ ಎಲ್ಲಾ ಕಾಲುವೆಗಳಿಗೆ ಮುಂಗಾರು ಹಂಗಾಮಿಗೆ ನೀರು ಹರಿಯಬೇಕಿತ್ತು. ಆದರೆ, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ 10ರಲ್ಲಿ ವಿತರಣಾ ಕಾಲುವೆ ಸಂಖ್ಯೆ 3ರಲ್ಲಿ ಸಮಸ್ಯೆ ಉಂಟಾಗಿತ್ತು. ಇದರಿಂದ ಕಾಲುವೆಗೆ ನೀರು ಹರಿದಿರಲಿಲ್ಲ. ಮೂರು ದಿನಗಳ ಕಾಲ ದುರಸ್ತಿ ಕಾರ್ಯ ಪೂರ್ಣಗೊಂಡು ಭಾನುವಾರ ಬೆಳಿಗ್ಗೆಯಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ.

ಈ ನೀರು ಭಾನುವಾರ ರಾತ್ರಿ ಕಿ.ಮೀ. 12 ರಲ್ಲಿನ ಹುಲ್ಲೂರ ಬಳಿಯ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಡಿಲೆವರಿ ಚೇಂಬರ್ ತಲುಪಿದ್ದು, ಅಲ್ಲಿನ ಜಾಕವೆಲ್ ಮೂಲಕ ನೀರು ಎತ್ತಿ ಚಿಮ್ಮಲಗಿ ಪಶ್ಚಿಮ ಕಾಲುವೆಗೆ ಹಾಗೂ ಪೂರ್ವ ಕಾಲುವೆಗೆ ಕೆರೆಗಳ ಭರ್ತಿಗೆ ನೀರು ಹರಿಯಲಿದೆ.

ADVERTISEMENT

‘ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಎರಡು ಮೋಟಾರ್ ಚಾಲು ಮಾಡಲಾಗಿದ್ದು, ರಾತ್ರಿ ಇನ್ನೊಂದು ಮೋಟಾರ್ ಚಾಲು ಮಾಡಲಾಗುತ್ತದೆ. ಬೆಳಿಗ್ಗೆ ಮತ್ತೆರೆಡು ಮೋಟಾರ್ ಆರಂಭಿಸಲಾಗುವುದು’ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಆಲಮಟ್ಟಿ ಎಡದಂಡೆ ಕಾಲುವೆಯು 85 ಕಿ.ಮೀ ಉದ್ದವಿದ್ದು, ಅದರ ಮೂಲಕ 20,235 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ. ‘ಕಾಲುವೆಗೆ ಹರಿಯದ ನೀರು’ ಕುರಿತು ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.