ವಿಜಯಪುರ: ‘ನಿಸರ್ಗ’ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಬಿರುಗಾಳಿಯ ಅಬ್ಬರ ಜೋರಾಗಿತ್ತು.
ಬೆಳಿಗ್ಗೆಯಿಂದ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಚದುರಿದಂತೆ ಜಿಟಿಜಿಟಿ ಮಳೆಯಾಯಿತು.
ವಿಜಯಪುರ ನಗರದ ಬಸ್ ನಿಲ್ದಾಣದ ಎದುರಿನ ವೃತ್ತದಲ್ಲಿ ಬೇಸಿಗೆ ಬಿಸಿಲಿನಿಂದ ರಕ್ಷಣೆಗಾಗಿ ಮಹಾನಗರ ಪಾಲಿಕೆ ಅಳವಡಿಸಿದ್ದ ಹಸಿರು ಪರದೆ ಹರಿದುಹೋಯಿತು. ಉಳಿದಂತೆ ಗಾಳಿಯ ಅಬ್ಬರಕ್ಕೆ ರಸ್ತೆಯಲ್ಲಿ ದೂಳು ಮುಖಕ್ಕೆ ರಾಚುತ್ತಿತ್ತು. ದಿನಪೂರ್ತಿ ಶೀತಮಯ ವಾತಾವರಣ ಇತ್ತು.
ತಾಳಿಕೋಟೆಯಲ್ಲಿ ಮಧ್ಯಾಹ್ನ 15 ನಿಮಿಷಗಳ ಕಾಲ ಸಾಧಾರಣ ಮಳೆ ಸುರಿಯಿತು.
ಮಂಗಳವಾರದ ಮಳೆ ವಿವರ
ಬಸವನ ಬಾಗೇವಾಡಿಯಲ್ಲಿ 9.2 ಮಿ.ಮೀ. ಮಳೆಯಾಗಿದೆ. ಹೂವಿನ ಹಿಪ್ಪರಗಿ 7.2, ನಾಗಠಾಣ 2, ನಾದ ಬಿ.ಕೆ 3.2, ಹೊರ್ತಿ 5.8, ಚಡಚಣ 0.4, ಝಳಕಿ 6, ಮುದ್ದೇಬಿಹಾಳ 8, ಢವಳಗಿ 4, ದೇವರ ಹಿಪ್ಪರಗಿ 9.4, ಕೊಂಡಗೂಳಿ 2.1 ಮಿ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.