ADVERTISEMENT

‌‘ಡಾ.ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿಗೆ ರಶ್ಮಿ. ಎಸ್ ಸೇರಿ ಐವರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 13:20 IST
Last Updated 14 ನವೆಂಬರ್ 2024, 13:20 IST
<div class="paragraphs"><p>ರಶ್ಮಿ ಎಸ್,&nbsp;ಸೋಮಲಿಂಗ ಬೇಡರ, ರಾಜಕುಮಾರ.ಬಿ</p></div>

ರಶ್ಮಿ ಎಸ್, ಸೋಮಲಿಂಗ ಬೇಡರ, ರಾಜಕುಮಾರ.ಬಿ

   

ವಿಜಯಪುರ: ವಿಜಯಪುರದ ಕನ್ನಡ ಪುಸ್ತಕ ಪರಿಷತ್ತು 2023ನೇ ಸಾಲಿನ ಪ್ರಕಟಿತ ಪುಸ್ತಕಗಳಿಗೆ ಕೊಡಮಾಡುವ ‘ಡಾ.ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿಗೆ ರಾಜ್ಯದ ಐವರು ಸಾಹಿತಿಗಳ ಕೃತಿಗಳು ಆಯ್ಕೆಯಾಗಿವೆ ಎಂದು ಪರಿಷತ್ ಕಾರ್ಯದರ್ಶಿ ಶಂಕರ ಬೈಚಬಾಳ ತಿಳಿಸಿದ್ದಾರೆ.

ಪತ್ರಕರ್ತೆ ಬೀದರ್‌ನ ರಶ್ಮಿ ಎಸ್. ಅವರ ‘ಈ ಪಿಕ್ ಯಾರ ಕ್ಲಿಕ್’(ಅನುವಾದ), ಬೆಂಗಳೂರಿನ ರಾಜಕುಮಾರ ಬಿ. ಅವರ ‘ಕನ್ನಡ ಅಸ್ಮಿತೆಯ ಚಹರೆಗಳು’ ( ಜೀವನ ಚರಿತ್ರೆ), ಬಾಗಲಕೋಟೆಯ ಸೋಮಲಿಂಗ ಬೇಡರ ಅವರ ‘ಗೊರಿ ಮತ್ತು ಧರ್ಮ’ (ಕಾವ್ಯ ), ಬೆಳಗಾವಿಯ ಡಾ.ಗುಂಡಣ್ಣ ಕಲಬುರ್ಗಿ ಅವರ ಸಂಕೀರ್ಣ ಬರಹ (ಒಟ್ಟು ಕೃತಿಗಳು) ಮತ್ತು ಯಾದಗಿರಿಯ ಸಿದ್ರಾಮ ಹೊನಕಲ್ ಅವರ ‘ಶಾಹಿರಿ ಲೋಕ’ (ಗಜಲ್) ಕೃತಿಗಳು ಆಯ್ಕೆಯಾಗಿವೆ.

ADVERTISEMENT

ಪ್ರಶಸ್ತಿಯು ತಲಾ ₹10 ಸಾವಿರ ನಗದು, ಸ್ಮರಣಿಕೆ, ಪ್ರಮಾಣಪತ್ರವನ್ನೊಳಗೊಂಡಿದೆ. ಡಿಸೆಂಬರ್ ಮೊದಲ ವಾರದಲ್ಲಿ ವಿಜಯಪುರದ ಚೇತನಾ ಕಾಲೇಜಿನಲ್ಲಿ ನಡೆಯಲಿರುವ ಕನ್ನಡ ಪುಸ್ತಕ ಪರಿಷತ್ತಿನ ಸಮ್ಮೇಳನದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ಸಂಶೋಧಕ ಡಾ. ವೀರಣ್ಣ ರಾಜೂರ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.