ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 10:56 IST
Last Updated 1 ಸೆಪ್ಟೆಂಬರ್ 2022, 10:56 IST
ವಿಜಯಪುರ ನಗರದ ಇಂಡಿ ರೋಡ್‌  ವಡ್ಡರ ಗಲ್ಲಿಯಲ್ಲಿ ಶ್ರೀಮುರುಗಮ್ಮ ಗಜಾನನ ತರುಣ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ  ಪೆಂಡಾಲ್‌ ಬುಧವಾರ ರಾತ್ರಿ ಗಾಳಿ, ಮಳೆಗೆ ಉರುಳಿಬಿದ್ದ ಪರಿಣಾಮ ಶುಕ್ರವಾರ ಪೆಂಡಾಲ್‌ ಅನ್ನು ಹೊಸದಾಗಿ ನಿರ್ಮಿಸಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಇಂಡಿ ರೋಡ್‌  ವಡ್ಡರ ಗಲ್ಲಿಯಲ್ಲಿ ಶ್ರೀಮುರುಗಮ್ಮ ಗಜಾನನ ತರುಣ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ  ಪೆಂಡಾಲ್‌ ಬುಧವಾರ ರಾತ್ರಿ ಗಾಳಿ, ಮಳೆಗೆ ಉರುಳಿಬಿದ್ದ ಪರಿಣಾಮ ಶುಕ್ರವಾರ ಪೆಂಡಾಲ್‌ ಅನ್ನು ಹೊಸದಾಗಿ ನಿರ್ಮಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ತಡರಾತ್ರಿಯಿಂದ ಗುರುವಾರ ಬೆಳಿಗ್ಗೆ ವರೆಗೆ ನಾಲ್ಕೈದು ತಾಸು ಧಾರಾಕಾರ ಮಳೆಯಾಗಿದೆ.

ಗಣೇಶೋತ್ಸವದ ಆಚರಣೆಗೆ ಬುಧವಾರ ದಿನವಿಡೀ ಬಿಡುವು ನೀಡಿದ್ದ ವರುಣ ರಾತ್ರ ವೇಳೆ ಎಡಬಿಡದೇ ಆರ್ಭಟಿಸಿದ ಪರಿಣಾಮ ಉತ್ಸವ ಸಮಿತಿಗಳು ಪೆಂಡಾಲ್‌ಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನನ್ನು ಮಳೆಯಿಂದ ರಕ್ಷಣೆ ಮಾಡುವುದು ಸಂಘಟಕರಿಗೆ ಕಷ್ಟವಾಯಿತು. ನಡುವೆ ವಿದ್ಯುತ್‌ ಕೈಕೊಟ್ಟ ಕಾರಣ ಸಂಘಟಕರು ತೊಂದರೆ ಅನುಭವಿಸಿದರು.

ರಸ್ತೆ, ಹೊಲಗಳಲ್ಲಿ ಮಳೆ ನೀರು ನಿಂತಿರುವುದು ಕಂಡುಬಂದಿತು. ಕೊಯ್ಲಿಗೆ ಬಂದಿರುವ ಸೂರ್ಯಕಾಂತಿ, ಜೋಳ, ಈರುಳ್ಳಿ ಬೆಳೆಗೆ ಆಗಾಗ ಸುರಿಯುತ್ತಿರುವ ಮಳೆಯಿಂದ ತೊಂದರೆಯಾಗಿದೆ.

ADVERTISEMENT

ದೇವರ ಹಿಪ್ಪರಗಿಯಲ್ಲಿ ಅತಿ ಹೆಚ್ಚು ಅಂದರೆ, 53 ಮಿ.ಮೀ. ಮಳೆಯಾಗಿದೆ. ಉಳಿದಂತೆಆಲಮಟ್ಟಿ 44.6, ಹೂವಿನ ಹಿಪ್ಪರಗಿ 40.8,ಕೊಂಡಗೂಳಿ 39.2,ಮಟ್ಟಿಹಾಳ 43.4, ಕನ್ನೂರ 38.4, ಆಲಮೇಲ 37, ಢವಳಗಿ 35.4, ರಾಮನಹಳ್ಳಿ 35.2, ಮಮದಾಪೂರ 31, ಸಿಂದಗಿ 30.1, ಹಿಟ್ನಳ್ಳಿ 28.8,ಚಡಚಣ 23.2,ಬಬಲೇಶ್ವರ 22.2, ವಿಜಯಪುರ 21.8, ಅಗರಖೇಡ 21.1, ಕಡ್ಲೆವಾಡ 20.3,ಭೂತನಾಳ 15.6, ಬಸವನ ಬಾಗೇವಾಡಿ 14.5, ತಿಕೋಟಾ 14.2, ಹಲಸಂಗಿ 14, ಮನಗೂಳಿ 10.2, ಇಂಡಿ 10, ನಾದ ಬಿ. ಕೆ. 9.4, ಹೊರ್ತಿ 8.8, ಮುದ್ದೆಬಿಹಾಳ 7.4, ನಾಲತವಾಡ 6.7, ಸಾಸಾಬಾಳ 6.2, ನಾಗಠಾಣ 6.4, ಕುಮಟಗಿ 5.2, ಅರೇಶಂಕರ 4, ಝಳಕಿ 3.2 ಮಿ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.