ADVERTISEMENT

ತುಳಜಾಪುರ: ನವರಾತ್ರಿ ಉತ್ಸವ ಅ.3ರಂದು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:51 IST
Last Updated 2 ಅಕ್ಟೋಬರ್ 2024, 15:51 IST
 ತುಳಜಾ ಭವಾನಿ ದೇವಿಯ ಮೂರ್ತಿ 
 ತುಳಜಾ ಭವಾನಿ ದೇವಿಯ ಮೂರ್ತಿ    

ಸೋಲಾಪುರ: ತುಳಜಾಪುರದ ಕುಲದೇವತೆಯಾದ ತುಳಜಾ ಭವಾನಿಯ ನವರಾತ್ರಿ ಉತ್ಸವ ಅ.3ರಂದು ಘಟಸ್ಥಾಪನೆಯೊಂದಿಗೆ ಪ್ರಾರಂಭವಾಗಲಿದೆ. ನವರಾತ್ರಿ ಉತ್ಸವಕ್ಕೆ ಸಕಲಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಸಚಿನ ಒಂಬಾಸೆ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3ರಿಂದ 17ರ ವರೆಗೆ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದಾರೆ ಎಂದರು.

ತುಳಜಾ ಭವಾನಿ ದೇವಸ್ಥಾನ ಪೂಜಾರಿ ಮಂಡಳದ ಉಪಾಧ್ಯಕ್ಷ ವಿಪಿನ್ ಸಿಂಧೆ ಮಾತನಾಡಿ, ಅ.3ರಂದು ಬೆಳಿಗ್ಗೆ ತುಳಜಭವಾನಿ ದೇವಿಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ, ಮಧ್ಯಾಹ್ನ 12ಕ್ಕೆ ಘಟಸ್ಥಾಪನೆ,  ಅ.4ರಿಂದ 6ರ ವರೆಗೆ ದಿನನಿತ್ಯದ ಪೂಜೆ, ಅ.7ರಂದು ದೇವಿಯ ಲಲಿತ ಪಂಚಮಿ, ರಥ ಅಲಂಕಾರ ಮಹಾಪೂಜೆ ಹಾಗೂ ರಾತ್ರಿ ಛಬಿನಾ, ಅ.8ರಂದು ದೇವಿಯ ಮುರಳಿ ಅಲಂಕಾರ ಮಹಾಪೂಜೆ ಹಾಗೂ ರಾತ್ರಿ ಛಬಿನಾ, ಅ.9ರಂದು ದೇವಿಯ ಶೇಷಶಾಹಿ ಅಲಂಕಾರ ಮಹಾಪೂಜಾ ನಡೆಯಲಿದೆ ಎಂದರು.

ADVERTISEMENT

ಅ.10ರಂದು ದೇವಿ ಭವಾನಿಯ ತಲವಾರು ಅಲಂಕಾರ ಮಹಾಪೂಜಾ ಹಾಗೂ ಅ.11ರಂದು ದುರ್ಗಾಷ್ಟಮಿ, ದೇವಿಯ ಮಹಿಷಾಸುರ ಮರ್ದಿನಿ ಅಲಂಕಾರ ಮಹಾಪೂಜೆ, ಅ.12 ರಂದು ಮಹಾನವಮಿ, ವಿಜಯದಶಮಿ, ಸೀಮೋಲ್ಲಂಘನ ಹಾಗೂ ರಾತ್ರಿ ಪಲ್ಲಕ್ಕಿ ಮೆರವಣಿಗೆ. ಅ.13ರಂದು ಬೆಳಿಗ್ಗೆ ದೇವಿಯ ಸೀಮೋಲ್ಲಂಘನ ಹಾಗೂ ಅ. 17ರಂದು ದೇವಸ್ಥಾನದ ಹುಣ್ಣಿಮೆ, ಬೆಳಿಗ್ಗೆ ದೇವಿಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ನಡೆಯಲಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ 9850029302, 9403709239 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.