ADVERTISEMENT

ಬೈಕ್ ಅಪಘಾತ : ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:25 IST
Last Updated 10 ಜುಲೈ 2024, 14:25 IST

ಇಂಡಿ: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಹಾಗೂ ಹಿಂಬದಿಯ ಸವಾರ ಮೃತಪಟ್ಟ ಘಟನೆ ಇಂಡಿ ತಾಲ್ಲೂಕಿನ ರೂಗಿ ಗ್ರಾಮದ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. 

ಮೃತರನ್ನು ನಾದ ಗ್ರಾಮದ ಸಿದ್ದು ಬಿರಾದಾರ (27) ಮತ್ತು ಲಾಳಸಂಗಿ ಗ್ರಾಮದ ನಾಗೇಶ ನಾವಿ (27) ಎಂದು ಗುರುತಿಸಲಾಗಿದೆ.

ರೂಗಿ ಕ್ರಾಸ್ ಬಳಿಯ ಸುಗಲಮ್ಮತಾಯಿ ಮಠದ ಮುಂದೆ ಈ ಅವಘಡ ಸಂಭವಿಸಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.