ADVERTISEMENT

ನಾಲತವಾಡ: ಇಬ್ಬರು ಗರ್ಭಿಣಿಯರಿಗೆ ಆಂಬುಲೆನ್ಸ್‌ನಲ್ಲಿ ಹೆರಿಗೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:44 IST
Last Updated 14 ನವೆಂಬರ್ 2024, 15:44 IST
ವಿಜಯಪುರ ಜಿಲ್ಲಾ ಆಸ್ಪತ್ರೆಗೆ ತೆರಳುವ ವೇಳೆ
ವಿಜಯಪುರ ಜಿಲ್ಲಾ ಆಸ್ಪತ್ರೆಗೆ ತೆರಳುವ ವೇಳೆ   

ನಾಲತವಾಡ: ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆಂದು ಆಂಬುಲೆನ್ಸ್‌ನಲ್ಲಿ ಇಬ್ಬರು ಗರ್ಭಿಣಿಯರನ್ನು ಕರೆದುಕೊಂಡು ಹೋಗುವ ವೇಳೆ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಒಬ್ಬರಿಗೆ ಹೆರಿಗೆಯಾದ ಕ್ಷಣಮಾತ್ರದಲ್ಲಿ, ಆತಂಕಕ್ಕೆ ಒಳಗಾದ ಮತ್ತೊಬ್ಬ ಮಹಿಳೆಯೂ ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಕಂದಗನೂರ ಗ್ರಾಮದ ಸಲ್ಮಾ ಚಪ್ಪರಬಂದ ಹಾಗೂ ಕಾಳಗಿ ಗ್ರಾಮದ ಶಕೀರಾಬೇಗಂ ಅಕ್ಬರ್ ಎಂಬವರು ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಂದಿರು.

ಬೆಳಿಗ್ಗೆ ಸಲ್ಮಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಮೀಪದಲ್ಲಿ ಆಂಬುಲೆನ್ಸ್‌ ದೊರಕದೆ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಿಂದ ಬಂದ ಅಂಬುಲೆನ್ಸ್ ಮೂಲಕ ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ವೇಳೆ, ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗಿದೆ. ಇಬ್ಬರೂ ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದಾರೆ. ನರ್ಸ್, ಆಶಾ ಕಾರ್ಯಕರ್ತೆ ಜೊತೆಗೆ ಇಎಂಟಿ ಅಂಬ್ಯುಲೆನ್ಸ್ ಸಿಬ್ಬಂದಿ ಶಿವು ಇದ್ದು ಹೆರಿಗೆಯನ್ನು ಸುಸೂತ್ರವಾಗಿ ನಡೆಸಿದ್ದಾರೆ.

ADVERTISEMENT

ಇಬ್ಬರು ತಾಯಂದಿರು ಹಾಗೂ ಶಿಶುಗಳು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಜಯಪುರ ಜಿಲ್ಲಾ ಆಸ್ಪತ್ರೆಗೆ ತೆರಳುವ ವೇಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.